ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕಾಪಾಡುವಂತೆ ಬೆಂಬಲಿಗರಿಗೆ ಮಮತಾ ಬ್ಯಾನರ್ಜಿ ಕರೆ

Last Updated 11 ಮಾರ್ಚ್ 2021, 11:04 IST
ಅಕ್ಷರ ಗಾತ್ರ

ಕೋಲ್ಕತ್ತ: ಅಪರಿಚಿತರು ತಳ್ಳಿದ ಪರಿಣಾಮ ಕಾಲಿಗೆ ಗಾಯ ಮಾಡಿಕೊಂಡು ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗರಲ್ಲಿ ಬುಧವಾರ ಮನವಿ ಮಾಡಿದ್ದಾರೆ.

ಆಸ್ಪತ್ರೆಯ ಹಾಸಿಗೆಯಿಂದ ವಿಡಿಯೊ ಸಂದೇಶ ಹಂಚಿರುವ ಮಮತಾ ಬ್ಯಾನರ್ಜಿ, ಕೆಲವೇ ದಿನಗಳಲ್ಲಿ ಚುನಾವಣೆ ಅಖಾಡಕ್ಕೆ ಮರಳುವುದಾಗಿ ಹೇಳಿದ್ದು, ಅಗತ್ಯವಿದ್ದರೆ ವೀಲ್‌ಚೇರ್ ಮೂಲಕ ಪ್ರಚಾರ ಮಾಡುವುದಾಗಿ ತಿಳಿಸಿದರು.

ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗರಿಗೆ ಕರೆ ನೀಡಿರುವ ಮಮತಾ ಬ್ಯಾನರ್ಜಿ, ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಎಂದು ವಿನಂತಿಸಿದರು.

ಶಾಂತಿ ಹಾಗೂ ಸಂಯಮವನ್ನು ಪಾಲಿಸುವಂತೆ ನಾನು ನನ್ನ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಜನ ಸಾಮಾನ್ಯರಿಗೆ ಮನವಿ ಮಾಡುತ್ತೇನೆ. ಕಳೆದ ರಾತ್ರಿ ತೀವ್ರವಾಗಿ ಗಾಯವಾಗಿರುವುದು ನಿಜ. ಕಾಲು, ತಲೆ ಹಾಗೂ ಎದೆಯಲ್ಲಿ ತುಂಬಾ ನೋವಿನ ಅನುಭವವಾಗಿದೆ. ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ಹೇಳಿದರು.

ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಘಟನೆ ನಡೆದಿತ್ತು. ನನಗೆ ಪರಿಚಿತರಲ್ಲದ ನಾಲ್ಕೈದು ಜನರು ನನ್ನನ್ನು ಕೆಳಗೆ ತಳ್ಳಿದರು. ಅಲ್ಲದೇ ಎಡಗಾಲಿಗೆ ಗಾಯ ಆಗುವಂತೆ ಕಾರಿನ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಚುನಾವಣೆಗೂ ಮುನ್ನ ಒಂದು ದಿನವೂ ವ್ಯರ್ಥ ಮಾಡುವುದಿಲ್ಲ ಎಂದು ಮಮತಾ ಘೋಷಿಸಿದರು. ನಾನು ಒಂದು ಅಥವಾ ಎರಡು ದಿನಗಳಲ್ಲಿ ಅಭಿಯಾನಕ್ಕೆ ಹಿಂತಿರುಗುತ್ತೇನೆ. ಅಗತ್ಯವಿದ್ದರೆ ವೀಲ್‌ಚೇರ್ ಬಳಕೆ ಮಾಡುವುದಾಗಿ ಹೇಳಿದರು.

ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲಿನ ದಾಳಿಯನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್ ಪಕ್ಷವು ಬುಧವಾರ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆಯನ್ನು ನಡೆಸಿದೆ. ಪ್ರತಿಭಟನೆ ಮೆರವಣಿಗೆ ನಡೆಸಿರುವ ಕಾರ್ಯಕರ್ತರು ಹಲೆವೆಡೆ ರಸ್ತೆಗಳಲ್ಲಿ ಟೈರ್ ಸುಟ್ಟು ಹಾಕಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮತ್ತಷ್ಟು ಸುದ್ದಿಗಳು...








ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT