ನವದೆಹಲಿ: ಆಪರೇಷನ್ ಸಿಂಧೂರದ ಕುರಿತಾಗಿ ವಿಶ್ವ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಲು ಭಾರತದಿಂದ ವಿವಿಧ ದೇಶಗಳಿಗೆ ತೆರಳಿರುವ ಭಾರತದ ಸರ್ವಪಕ್ಷ ನಿಯೋಗವೊಂದರ ನೇತೃತ್ವ ವಹಿಸಿರುವ ಡಿಎಂಕೆ ಸಂಸದೆ ಕನಿಮೋಳಿ, ಭಾರತದ ರಾಷ್ಟ್ರ ಭಾಷೆ ಯಾವುದು ಎಂಬ ಪ್ರಶ್ನೆಯೊಂದಕ್ಕೆ 'ವಿವಿಧತೆಯಲ್ಲಿ ಏಕತೆ' ಎಂಬ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಭಾರತದ ರಾಷ್ಟ್ರೀಯ ಭಾಷೆ ವಿವಿಧತೆಯಲ್ಲಿ ಏಕತೆ. ಈ ನಿಯೋಗವು ಜಗತ್ತಿಗೆ ನೀಡಿದ ಸಂದೇಶವೇ ಅದು. ಅದು ಇಂದಿನ ಅತ್ಯಂತ ಮುಖ್ಯವಾದ ವಿಷಯ ಎಂದು ಅವರು ಮ್ಯಾಡ್ರಿಡ್ನಲ್ಲಿರುವ ಭಾರತೀಯ ವಲಸಿಗರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಭಯೋತ್ಪಾದನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,‘ನಮ್ಮ ದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ. ದುರದೃಷ್ಟವಶಾತ್, ಭಯೋತ್ಪಾದನೆಯಿಂದ ಗಮನ ಬೇರೆಡೆ ಹೋಗುತ್ತಿದೆ. ನಾವು ಭಯೋತ್ಪಾದನೆಯನ್ನು ಎದುರಿಸಬೇಕಾಗಿದೆ. ಯುದ್ಧವು ಸಂಪೂರ್ಣವಾಗಿ ಅನಗತ್ಯ’ಎಂದು ಒತ್ತಿ ಹೇಳಿದರು. ಭಾರತ ಸುರಕ್ಷಿತ ಸ್ಥಳವಾಗಿದೆ ಮತ್ತು ಕಾಶ್ಮೀರ ಸುರಕ್ಷಿತವಾಗಿದೆ ಎಂಬುದನ್ನು ಸರ್ಕಾರಖಚಿತಪಡಿಸುತ್ತದೆ ಎಂದು ಡಿಎಂಕೆ ಸಂಸದೆ ಹೇಳಿದ್ದಾರೆ.

ಭಾರತೀಯರಾಗಿನಾವು ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶ ಸಾರಬೇಕಿದೆ. ಪಾಕಿಸ್ತಾನ ಯಾವುದೇ ಪ್ರಯತ್ನ ಮಾಡಬಹುದು. ಆದರೆ, ಅವರು ನಮ್ಮನ್ನು ಹಳಿತಪ್ಪಿಸಲು ಸಾಧ್ಯವಿಲ್ಲ. ಕಾಶ್ಮೀರ ಸುರಕ್ಷಿತ ಸ್ಥಳವಾಗಿ ಉಳಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಕನಿಮೋಳಿ ನೇತೃತ್ವದ ನಿಯೋಗದ ಐದು ರಾಷ್ಟ್ರಗಳ ಭೇಟಿಯ ಕೊನೆಯ ಹಂತ ಸ್ಪೇನ್ ಆಗಿದ್ದು, ನಂತರ ಅದು ಭಾರತಕ್ಕೆ ಹಿಂತಿರುಗಲಿದೆ. ತಂಡದಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ, ಬಿಜೆಪಿಯ ಬ್ರಿಜೇಶ್ ಚೌಟಾ, ಎಎಪಿಯ ಅಶೋಕ್ ಮಿತ್ತಲ್, ಆರ್ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ಮಾಜಿ ರಾಜತಾಂತ್ರಿಕ ಮಂಜೀವ್ ಸಿಂಗ್ ಪುರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.