ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸರ್ಕಾರದಿಂದ ಯಾವ ನ್ಯಾಯ ಸಿಗಲಿದೆ: ಅನುರಾಗ್‌ ಠಾಕೂರ್‌

Published 24 ಏಪ್ರಿಲ್ 2024, 16:04 IST
Last Updated 24 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಹೈದರಾಬಾದ್‌: ಕರ್ನಾಟಕದಲ್ಲಿ ಕಾಂಗ್ರೆಸ್‌ ಕೌನ್ಸಿಲರ್‌ನ ಮಗಳೇ ಕೊಲೆಯಾಗಿದ್ದು, ಆ ಪಕ್ಷವು ಯಾವ ನ್ಯಾಯದ ಖಾತರಿ ನೀಡಬಹುದು ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಬುಧವಾರ ಪ್ರಶ್ನಿಸಿದರು.

ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕುಟುಂಬದವರು ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಬೇಕಾಯಿತು ಎಂದೂ ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ‘ಎಲ್ಲರ ಜತೆ, ಎಲ್ಲರ ಅಭಿವೃದ್ಧಿ’ ಎಂಬ ಭರವಸೆಯನ್ನು ನೀಡಿದೆ ಎಂದರು.

‘ರಾಹುಲ್‌ ಗಾಂಧಿ ಅವರ ‘ದ್ವೇಷದ ಅಂಗಡಿ’, ಬಜಾರ್‌ ಆರಂಭಗೊಂಡಿದೆ. ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ನೇಹಾ ಅವರ ಕುಟುಂಬಕ್ಕೆ ನ್ಯಾಯ ಸಿಗದು. ಅದಕ್ಕಾಗಿಯೇ ಅವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT