ನವದೆಹಲಿ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸ್ವತಃ ಪತ್ರ ಬರೆಯದ ಪ್ರಧಾನಿ ಮೋದಿ ಅವರು ಹಿರಿಯ ನಾಯಕರಿಗೆ ಅಗೌರವ ತೋರಿದ್ದಾರೆ ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಉನ್ನತ ಸ್ಥಾನದಲ್ಲಿರುವ ನಾಯಕರು ತಿರಸ್ಕರಿಸಿರುವುದು ದುರದೃಷ್ಟಕರ. ಇಂದಿನ ರಾಜಕಾರಣದಲ್ಲಿ ಪೂರ್ಣ ವಿಷ ತುಂಬಿಕೊಂಡಿದೆ. ಪ್ರಧಾನಿಯವರು ತಮ್ಮ ಸ್ಥಾನದ ಘನತೆಯನ್ನು ಗಮನದಲ್ಲಿಟ್ಟುಕೊಂಡು ವರ್ತಿಸಬೇಕಿತ್ತು. 82 ವರ್ಷದ ಹಿರಿಯ ನಾಯಕರೊಬ್ಬರಿಗೆ ಅಗೌರವ ತೋರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದ ಖರ್ಗೆ ಅವರು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಡಳಿತಾರೂಢ ಮೈತ್ರಿಪಕ್ಷದ ಸದಸ್ಯರು ‘ತೀರಾ ಆಕ್ಷೇಪಣೀಯ’ ಹಾಗೂ ಹಿಂಸಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಗಮನ ಸೆಳೆದಿದ್ದರು. ಖರ್ಗೆ ಅವರ ಈ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಜೆ.ಪಿ ನಡ್ಡಾ ಅವರು, ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಪಕ್ಷದವರ ದೂರುಗಳು ಹಾಗೂ ಕಾಂಗ್ರೆಸ್ ನಾಯಕರು ಮೋದಿ ಅವರ ವಿರುದ್ಧ ಬಳಸಿದ್ದ ಪದಗಳ ಬಗ್ಗೆ ಪ್ರಸ್ತಾಪಿಸಿದ್ದರು.

‘ಪ್ರಧಾನಿ ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ವಿಶ್ವಾಸವಿದ್ದಿದ್ದರೆ ಮತ್ತು ಹಿರಿಯರ ಜೊತೆ ಸೌಜನ್ಯವಾಗಿ ಮಾತನಾಡುವ ಹಾಗೂ ಅವರ ಮೇಲೆ ಗೌರವ ಇಟ್ಟುಕೊಂಡಿದ್ದರೆ, ತಮಗೆ ಬಂದ ಪತ್ರಕ್ಕೆ ಸ್ವತಃ ಮೋದಿ ಅವರೇ ಪ್ರತಿಕ್ರಿಯೆ ನೀಡುತ್ತಿದ್ದರು. ಬದಲಿಗೆ ಅವರು ಸಾಕಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ. ನಡ್ಡಾ ಅವರಿಂದ ಆಕ್ರಮಣಕಾರಿ ಪ್ರತಿಕ್ರಿಯೆ ಕೊಡಿಸಲಾಗಿದೆ’ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

‘ಪ್ರಶ್ನೆಗಳನ್ನು ಕೇಳುವುದು ಮತ್ತು ಚರ್ಚೆ ನಡೆಸುವುದು ಪ್ರಜಾಪ್ರಭುತ್ವದ ಸಂಪ್ರದಾಯ ಹಾಗೂ ಸಂಸ್ಕೃತಿ. ಧರ್ಮದಲ್ಲೂ ಘನತೆ ಮತ್ತು ಮೌಲ್ಯಗಳಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.’ ಪ್ರಧಾನಿಯು ಗೌರವಯುತವಾಗಿ ಖರ್ಗೆ ಅವರಿಗೆ ಪ್ರತಿಕ್ರಿಯೆ ನೀಡಿದ್ದರೆ ಅವರ ಘನತೆ ಹೆಚ್ಚಾಗುತ್ತಿತ್ತು ಎಂದು ತಿಳಿಸಿದ್ದಾರೆ.

ನಡ್ಡಾ ಅವರ ಪತ್ರಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಪ್ರಭಾರ) ಜೈರಾಮ್ ರಮೇಶ್ ಅವರು ನಡ್ಡಾ ಅವರ ಪ್ರತಿಕ್ರಿಯೆ ‘ಬಾಲಿಶ’ ಎಂದು ಜರಿದಿದ್ದರು. ಅಲ್ಲದೇ ಪ್ರಧಾನಿ ‘ಕ್ಷುಲ್ಲಕ ರಾಜಕಾರಣ’ ಕೈಬಿಡಲಿ ಎಂದೂ ಕಾಂಗ್ರೆಸ್ ಸಲಹೆ ನೀಡಿತ್ತು.

ಪ್ರಿಯಾಂಕಾಗೆ ಸಂಸದೀಯ ಸಂಪ್ರದಾಯಗಳ ಅರಿವಿಲ್ಲ: ಕಿರಣ್ ರಿಜಿಜು

ನವದೆಹಲಿ: ಖರ್ಗೆ ಅವರಿಗೆ ಸ್ವತಃ ಪತ್ರ ಬರೆಯದೆ ಪ್ರಧಾನಿ ಮೋದಿ ಅವರು ಅಗೌರವ ತೋರಿದ್ದಾರೆ ಎಂದು ಆರೋಪಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸಂಸದೀಯ ಸಂಪ್ರದಾಯಗಳು ಮತ್ತು ಮಾನದಂಡಗಳ ಅರಿವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಅವರು ‘ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರಿಗೆ ನಾವು ಗೌರವ ನೀಡುತ್ತೇವೆ. ಖರ್ಗೆ ಅವರು ರಾಜ್ಯಸಭೆಯ ವೀರೋಧಪಕ್ಷದ ನಾಯಕರಾಗಿದ್ದು ಜೆ.ಪಿ ನಡ್ಡಾ ಅವರು ರಾಜ್ಯಸಭೆಯ ಸಭಾನಾಯಕರಾಗಿದ್ದಾರೆ. ಸಭಾನಾಯಕರಿಗಿಂತಲೂ ವಿರೋಧಪಕ್ಷದ ನಾಯಕ ಹೆಚ್ಚೇ?’ ಎಂದು ಅವರು ಪ್ರಶ್ನಿಸಿದ್ದಾರೆ. ಸಂಪೂರ್ಣ ಸಾರ್ವಜನಿಕ ಜೀವನದಲ್ಲೇ ಇರುವ ಹಾಗೂ 140 ಕೋಟಿ ಭಾರತೀಯರ ಪ್ರಧಾನಿಯನ್ನು ನಿಂದಿಸಬೇಡಿ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.