ಕಾಂಗ್ರೆಸ್ ಕೋಮುವಾದಿ ಬಿಜೆಪಿಯನ್ನು ದೂರವಿಡಲು ಹಾಗೂ ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಣೆಗಾಗಿ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ ನಡುವಿನ ಮೈತ್ರಿಯನ್ನು ಸ್ವಾಗತಿಸುವುದಾಗಿ ಎಂದು ಕಾಂಗ್ರೆಸ್ ಹೇಳಿದೆ. ಮೈತ್ರಿಗೆ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಲವು ತೋರಿದ್ದಾರೆ ಎಂಬ ವರದಿಗಳ ಕುರಿತು ಕಾಂಗ್ರೆಸ್‌ನ ರಾಜ್ಯ ವಕ್ತಾರ ಅತುಲ್ ಲೋಂಡೆ ಪ್ರತಿಕ್ರಿಯಿಸಿದ್ದಾರೆ. ‘ಅಧಿಕಾರದಲ್ಲಿರುವವರು ಜಾತಿ ಮತ್ತು ಕೋಮು ವಿಭಜನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಶಾಹು ಮಹಾರಾಜರು ಮಹಾತ್ಮ ಫುಲೆ ಹಾಗೂ ಅಂಬೇಡ್ಕರ್ ಅವರ ಆಶಯ ಸಿದ್ಧಾಂತವನ್ನು ದಿನವೂ ಹೊಸಕಿ ಹಾಕುತ್ತಿದ್ದಾರೆ. ಇದರ ರಕ್ಷಣೆಗಾಗಿ ಕಾಂಗ್ರೆಸ್ ಮೈತ್ರಿಯನ್ನು ಸ್ವಾಗತಿಸಲಿದೆ’ ಎಂದಿದ್ದಾರೆ.