ಭಾರತದಲ್ಲಿ 2018ರಲ್ಲಿ 11.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ವರ್ಷದಲ್ಲಿ 7.48 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿದೆ. ದೇಶದಲ್ಲಿ ಪ್ರತಿ ಹತ್ತು ಜನರ ಪೈಕಿ ಒಬ್ಬರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಅಂದಾಜಿಸಿದೆ. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್‌ಸಿ) ವತಿಯಿಂದ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ತಂಬಾಕು ಬಳಕೆಯಿಂದ ಉಲ್ಬಣವಾಗುತ್ತಿರುವ ಕ್ಯಾನ್ಸರ್ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ

ತಂಬಾಕು

ಪುರುಷರಲ್ಲಿ ಬಾಯಿ ಹಾಗೂ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಕಂಡುಬರುತ್ತಿದೆ.ಕ್ಯಾನ್ಸರ್‌ಗೆ ತುತ್ತಾಗುವವರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರೇ ಆಗಿದ್ದಾರೆ. ಇದಕ್ಕೆ ತಂಬಾಕು ಕಾರಣ ಎಂದು ವರದಿ ಅಭಿಪ್ರಾಯಪಟ್ಟಿದೆ

ಜೀವನಶೈಲಿ

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಜನರಲ್ಲಿ ಸ್ತನ ಹಾಗೂ ಕರುಳಿನ ಕ್ಯಾನ್ಸರ್ ಕಂಡುಬರುತ್ತಿದೆ. ಸ್ಥೂಲಕಾಯ, ಬೊಜ್ಜು, ಚಟುವಟಿಕೆ ಕೊರತೆ, ಜಡ ಜೀವನಶೈಲಿಯಿಂದ ಇವು ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳಿದೆ

ಡಬ್ಲ್ಯುಎಚ್‌ಒ ವರದಿ ಪ್ರಮುಖಾಂಶಗಳು

*ಮುಂದಿನ 20 ವರ್ಷಗಳಲ್ಲಿ ಜಾಗತಿಕವಾಗಿ ಕ್ಯಾನ್ಸರ್ ಪ್ರಮಾಣ ಶೇ 60ರಷ್ಟು ಹೆಚ್ಚುವ ಸಾಧ್ಯತೆ

*ಈ ಪೈಕಿ ಶೇ 15ರಷ್ಟು ದೇಶಗಳು ಮಾತ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಡಿ ಕ್ಯಾನ್ಸರ್‌ಗೆ ಸಮಗ್ರ ಚಿಕಿತ್ಸೆ ನೀಡುತ್ತಿವೆ

*ಎಲ್ಲ ದೇಶಗಳಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಮೊದಲಾದ ಸಮಗ್ರ ವೈದ್ಯಕೀಯ ಕಾರ್ಯಕ್ರಮ ಜಾರಿಗೊಳಿಸಿದಲ್ಲಿ, ಮುಂದಿನ 10 ವರ್ಷಗಳಲ್ಲಿ ಸುಮಾರು 70 ಲಕ್ಷ ಜನರನ್ನು ಕ್ಯಾನ್ಸರ್‌ನಿಂದ ಕಾಪಾಡಬಹುದು

ಧೂಮಪಾನಿ ತೊರೆದರೆ ಮಾತ್ರ ಉಳಿವು...

*ಜಗತ್ತಿನ ಶೇ 80ರಷ್ಟು ಧೂಮಪಾನಿಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ

*ಜಗತ್ತಿನಲ್ಲಿ ನಿತ್ಯ ಧೂಮಪಾನ ಮಾಡುವವರ ಪೈಕಿ ಶೇ 64ರಷ್ಟು ಜನರು 10 ದೇಶಗಳಿಗೆ ಸೀಮಿತವಾಗಿದ್ದಾರೆ

*ಪುರುಷ ಧೂಮಪಾನಿಗಳ ಪೈಕಿ ಶೇ 50ಕ್ಕೂ ಹೆಚ್ಚು ಜನರು ಚೀನಾ, ಭಾರತ ಹಾಗೂ ಇಂಡೊನೇಷ್ಯಾದಲ್ಲಿದ್ದಾರೆ

*ಜಗತ್ತಿನಲ್ಲಿ ನಿತ್ಯ ಧೂಮಪಾನ ಮಾಡುವವರ ಪೈಕಿ ಶೇ 64ರಷ್ಟು ಜನರು ಕೇವಲ 10 ದೇಶಗಳಿಗೆ ಸೇರಿದವರು

ಗರ್ಭಕೋಶದ ಕ್ಯಾನ್ಸರ್ ಪ್ರಮಾಣದಲ್ಲಿ ಇಳಿಕೆ

ಜಾಗತಿಕವಾಗಿ ಐದನೇ ಒಂದು ಭಾಗದಷ್ಟು ಗರ್ಭಕೋಶ ಕ್ಯಾನ್ಸರ್ ಪೀಡಿತರು ಭಾರತದಲ್ಲಿದ್ದರೂ, ದೇಶದಲ್ಲಿ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ 1983–87ರ ಅವಧಿಯಲ್ಲಿ ಲಕ್ಷಕ್ಕೆ 31.1 ಮಹಿಳೆಯರಲ್ಲಿ ಕಂಡುಬರುತ್ತಿದ್ದ ಗರ್ಭಕೋಶದ ಕ್ಯಾನ್ಸರ್ ಪ್ರಮಾಣ 2012–15ರ ವೇಳೆಗೆ 15.3ಕ್ಕೆ ತಗ್ಗಿದೆ. ಆರಂಭದಲ್ಲೇ ರೋಗ ಪತ್ತೆ, ಚಿಕಿತ್ಸೆ ಸಿಕ್ಕರೆ ರೋಗ ತಡೆಯಬಹದು

ಅಂಕಿ–ಅಂಶ

* 11.6 ಲಕ್ಷ –ಭಾರತದಲ್ಲಿ ಹೊಸ ಕ್ಯಾನ್ಸರ್ ಪ್ರಕರಣ

* 7.84 ಲಕ್ಷ –ಭಾರತದಲ್ಲಿ ಕ್ಯಾನ್ಸರ್‌ನಿಂದ ಸಾವು

* 16.4 ಕೋಟಿ –ದೇಶದಲ್ಲಿ ತಂಬಾಕು ಬಳಸುವವರು

* 6.9 ಕೋಟಿ –ದೇಶದಲ್ಲಿ ಧೂಮಪಾನಿಗಳು

ತಂಬಾಕಿನಿಂದ ಕ್ಯಾನ್ಸರ್

34%–69%; ಪುರುಷ

10%–27%; ಮಹಿಳೆ

ದೇಶದಲ್ಲಿ ಹೆಚ್ಚು ಕ್ಯಾನ್ಸರ್ ಪ್ರಕರಣ

ಪುರುಷರಲ್ಲಿ...

ಬಾಯಿ ಕ್ಯಾನ್ಸರ್; 92,000

ಶ್ವಾಸಕೋಶದ ಕ್ಯಾನ್ಸರ್; 49,000

ಉದರ ಕ್ಯಾನ್ಸರ್;39,000

ಕರುಳಿನ ಕ್ಯಾನ್ಸರ್; 37,000

ಅನ್ನನಾಳದ ಕ್ಯಾನ್ಸರ್; 34,000

ಮಹಿಳೆಯರಲ್ಲಿ....

ಸ್ತನ ಕ್ಯಾನ್ಸರ್; 162,500

ಅಂಡಾಶಯ ಕ್ಯಾನ್ಸರ್; 36,000

ಬಾಯಿ ಕ್ಯಾನ್ಸರ್; 28,000

ಗರ್ಭ ಕ್ಯಾನ್ಸರ್;97,000

ಕರುಳಿನ ಕ್ಯಾನ್ಸರ್; 20,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.