ನವದೆಹಲಿ: ʼನೀವುಚೀನಾದತ್ತ ಕೆಂಗಣ್ಣು ಬೀರಬಾರದೇಕೆ?ʼ ಎಂದು ಟ್ವೀಟ್ ಮಾಡುವ ಮೂಲಕಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಅವರನ್ನು ಕೆಣಕಿದ್ದಾರೆ.

ʼಗಡಿಯಿಂದ ಚೀನಾ ಸೇನೆ ಹಿಂದೆ ಸರಿದಿಲ್ಲʼ ಎಂಬವರದಿಯನ್ನು ಉಲ್ಲೇಖಿಸಿ, 56 ಇಂಚಿನ ಎದೆಯ ವ್ಯಕ್ತಿಯಾದ ನೀವು ಚೀನಾ ವಿರುದ್ಧ ಕೆಂಗಣ್ಣು ಬೀಡಬಾರದೇಕೆ? ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಪೂರ್ವ ಲಡಾಖ್ನಲ್ಲಿ 17 ತಿಂಗಳಿಂದ ತಲೆದೋರಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ನಡೆದ 13ನೇ ಸುತ್ತಿನ ಮಾತುಕತೆಯ ವಿಫಲವಾದ ಬಳಿಕ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರಧಾನಿ ಮೋದಿ ಚೀನಾವನ್ನು ಅತಿಕ್ರಮಣಕಾರ ಎನ್ನುವುದನ್ನು ನಿಲ್ಲಿಸಿದ್ದಾರೆ ಮತ್ತು ಒಂದೇಒಂದು ಇಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದೀಗ ಪ್ರಶ್ನೆಯೆಂದರೆ,13 ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಚರ್ಚಿಸಿದ್ದೇನು?ʼ ಎಂದು ಕೇಳಿದ್ದರು.

ಇದನ್ನೂ ಓದಿ:ಭಾರತ –ಚೀನಾ ಸೇನಾ ಮಾತುಕತೆಯಲ್ಲಿ ಸಿಗದ ಪರಿಹಾರ: ಪರಸ್ಪರ ದೂಷಣೆಯಲ್ಲೇ ಮುಗಿದ ಸಭೆ

ʼಚೀನಿಯರು ನಿರ್ಭೀತವಾಗಿ ಭಾರತದ ಭೂ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ. ಇದೇ ವೇಳೆ ಗಡಿಯಲ್ಲಿರುವ ನಮ್ಮ ಸೈನಿಕರು ಅವರನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ. ಆದರೆ ಈ ಸರ್ಕಾರ, ಮುಖ್ಯವಾಗಿ ಪ್ರಧಾನಮಂತ್ರಿಯವರು ಚೀನಾದ ಹೆಸರು ಹೇಳಲು ಮತ್ತು ಆ ದೇಶವನ್ನು ಹೊಣೆಯಾಗಿಸಲು ಹೆದರುತ್ತಿದ್ದಾರೆ. ದೇಶದ ಸೇನಾಪಡೆ ಮುಖ್ಯಸ್ಥರೂ, ಚೀನಾ ಇಲ್ಲಿಯೇ ಉಳಿದಿದೆ. ಪ್ರಧಾನಿ, ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಮೌನವಾಗಿರುವುದೇಕೆ?ʼ ಎಂದು ಪ್ರಶ್ನಿಸಿದ್ದಾರೆʼ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.