ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ ಪ್ರಕರಣ: ಕೊನೆಯ ಉಸಿರಿರುವವರೆಗೂ ಹೋರಾಟ; ಮಸೀದಿ ಸಮಿತಿ

Published 19 ಡಿಸೆಂಬರ್ 2023, 15:03 IST
Last Updated 19 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ಲಖನೌ: ಕಾಶಿ ವಿಶ್ವನಾಥ ದೇಗಲು–ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 1991ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸುವ ಸುಳಿವು ನೀಡಿರುವ ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿಯ ಮುಖ್ಯಸ್ಥರು, ಕೊನೆ ಉಸಿರಿರುವವರೆಗೂ ಹೋರಾಡುತ್ತೇವೆ ಎಂದಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ದೇವಾಲಯವನ್ನು ಪುನಃ ಸ್ಥಾಪಿಸುವ ಕುರಿತು 1991ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಧಾರ್ಮಿಕ ಪೂಜಾ ಸ್ಥಳದ ಕುರಿತು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದು ಹೈಕೋರ್ಟ್ ಹೇಳಿತ್ತು.

‘ಆದೇಶ ಪ್ರತಿ ಈಗಷ್ಟೇ ಸಿಕ್ಕಿದೆ. ಇದನ್ನು ಕೂಲಂಕಶವಾಗಿ ಪರಿಶೀಲಿಸಿ ಮುಂದೆ ಏನು ಮಾಡಬಹುದು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಅಂಜುಮನ್ ಇಂತೆಜಾಮಿಯಾ ಮಸೀದಿಯ ಜಂಟಿ ಕಾರ್ಯದರ್ಶಿ ಸಯ್ಯದ್ ಮಹಮ್ಮದ್ ಯಾಸೀನ್ ಹೇಳಿದ್ದಾರೆ.

‘ಈ ಪ್ರಕರಣದಲ್ಲಿ ನಿರ್ಧಾರವನ್ನು ಹೇಳಲಾಗಿದೆಯೇ ಹೊರತು, ನ್ಯಾಯವನ್ನಲ್ಲ. ಈ ಕಾನೂನು ಹೋರಾಟವನ್ನು ನಮ್ಮ ಉಸಿರು ಇರುವವರೆಗೂ ಮುಂದುವರಿಸಲಾಗುವುದು’ ಎಂದಿದ್ದಾರೆ.

ಮಸೀದಿ ನಿರ್ವಹಣಾ ಸಮಿತಿ ಹಾಗೂ ಉತ್ತರ ಪ್ರದೇಶ ಸುನ್ನಿ ವಕ್ಫ್‌ ಮಂಡಳಿ ಸಲ್ಲಿಸಿದ್ದ ಹಾಗೂ ಹಲವು ವರ್ಷಗಳಿಂದ ಬಾಕಿ ಇದ್ದ ಐದು ಅರ್ಜಿಗಳನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. 

‘ಧಾರ್ಮಿಕ ಗುಣಾಂಶಗಳ ಕುರಿತ ಯಾವುದೇ ವಿವರಣೆ ಕಾಯ್ದೆಯಲ್ಲಿಲ್ಲ. ಇದು ಎದುರುಗಾರ ಪಕ್ಷವು ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಕ್ಷ್ಯಗಳ ಮೇಲೆ ನಿರ್ಧಾರವಾಗುತ್ತದೆ. ಜ್ಞಾನವಾಪಿಯಲ್ಲಿ ಹಿಂದೂ ಪೂಜಾ ಸ್ಥಳವೂ ಇರಬಹುದು ಅಥವಾ ಮುಸ್ಲಿಂ ಧಾರ್ಮಿಕ ಆಚರಣೆಯ ಸ್ಥಳವೂ ಇರಬಹುದು. ಎರಡೂ ಇರಬಹುದು‘ ಎಂದು ನ್ಯಾ. ರೋಹಿತ್ ರಂಜನ್ ಅಗರ್ವಾಲ್ ಅವರು ಅಭಿಪ್ರಾಯಪಟ್ಟರು.

ಈ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಹೀಗಾಗಿ ಆರು ತಿಂಗಳ ಒಳಗಾಗಿ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ಪೀಠ ಹೇಳಿದೆ.

ಜ್ಞಾನವಾಪಿ ಮಸೀದಿ ಆವರಣ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಹಿಂದೂ ಮಹಿಳೆಯರ ಕೋರಿಕೆಯನ್ನು ಕೆಳ ಹಂತದ ನ್ಯಾಯಾಲಯ ಪುರಸ್ಕರಿಸಿ, ಅದಕ್ಕೆ ಪೂರಕವಾಗಿ ಮಸೀದಿ ಇರುವ ಜಾಗದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತ್ತು. ಅದು ಪೂರ್ಣಗೊಂಡು ವರದಿ ಸಲ್ಲಿಕೆಯಾಗಿದೆ. ಒಂದೊಮ್ಮೆ ಇನ್ನಷ್ಟು ಮಾಹಿತಿ ಅಗತ್ಯ ಇದ್ದಲ್ಲಿ, ಸರ್ವೆ ಕಾರ್ಯವನ್ನು ಮತ್ತಷ್ಟು ವಿಸ್ತರಿಸಲು ಎಎಸ್‌ಐಗೆ ನ್ಯಾಯಾಲಯ ಸೂಚಿಸಬಹುದು ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT