ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BJP ಅಧಿಕಾರಕ್ಕೆ ಬಂದರೆ ‘ಭಾಗ್ಯನಗರ’ವಾಗಲಿದೆ ಹೈದರಾಬಾದ್‌: ಕಿಶನ್ ರೆಡ್ಡಿ

Published 27 ನವೆಂಬರ್ 2023, 10:04 IST
Last Updated 27 ನವೆಂಬರ್ 2023, 10:04 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ ಅನ್ನು ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ, ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್‌ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತಾ ಹೈದರಾಬಾದ್‌ ಹೆಸರನ್ನು ಬದಲಾಯಿಸುತ್ತೇವೆ. ಹೈದರ್‌ ಯಾರು, ನಮಗೆ ಹೈದರ್‌ ಹೆಸರು ಬೇಕೇ, ಹೈದರ್‌ ಎಲ್ಲಿಂದ ಬಂದಿದ್ದಾನೆ, ಯಾರಿಗೆ ಹೈದರ್‌ ಬೇಕು ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಹೈದರ್‌ ಹೆಸರನ್ನು ತೆಗೆದು ಭಾಗ್ಯನಗರ ಎಂದು ಹೆಸರಿಸುತ್ತೇವೆ ಎಂದು ಹೇಳಿದರು.

ಮದ್ರಾಸ್‌, ಬಾಂಬೆ ಮತ್ತು ಕಲ್ಕತ್ತದಂತಹ ನಗರಗಳ ಹೆಸರನ್ನು ಬದಲಾಯಿಸಲಾಗಿದೆ. ಹೈದರಾಬಾದ್‌ ಹೆಸರನ್ನು ಏಕೆ ಬದಲಾಯಿಸಬಾರದು ಎಂದು ಅವರು ಪ್ರಶ್ನಿಸಿದರು.

ಮದ್ರಾಸ್‌ ಅನ್ನು ಚೆನ್ನೈ, ಬಾಂಬೆಯನ್ನು ಮುಂಬೈ ಹಾಗೂ ಕಲ್ಕತ್ತಾವನ್ನು ಕೋಲ್ಕತ್ತ ಎಂದು ಮರುನಾಮಕರಣ ಮಾಡಲಾಗಿದೆ. ಅದೇ ರೀತಿ ಹೈದರಾಬಾದ್‌ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವುದರಲ್ಲಿ ತಪ್ಪೇನಿದೆ ಎಂದು ಅವರು ಕೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಲಾಮ ಮನಸ್ಥಿತಿಯನ್ನು ಬಿಂಬಿಸುವ ಎಲ್ಲರನ್ನೂ ಸಂಪೂರ್ಣವಾಗಿ ಬದಲಾಯಿಸುತ್ತೇವೆ. ಹೆಸರು ಬದಲಾಯಿಸುವ ವಿಚಾರದಲ್ಲಿ ಬುದ್ಧಿಜೀವಿಗಳ ಸಲಹೆಯನ್ನೂ ಬಿಜೆಪಿ ಪಡೆಯಲಿದೆ ಎಂದು ಕಿಶನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT