ಪುಣೆ: ನಗರದ ಸ್ವಾರ್ಗೇಟ್ ಬಸ್ ನಿಲ್ದಾಣದ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಬಸ್ ಒಳಗಡೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.

‘ಅಪರಾಧದ ಹಿನ್ನೆಲೆಯುಳ್ಳ ದತ್ತ ಗಡೆ ಎಂಬಾತ ಈ ಹೇಯ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ಕಳ್ಳತನದ ಆರೋಪಗಳಿವೆ’ ಎಂದು ಸ್ವಾರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ಪೈಥಾನ್ಗೆ ತೆರಳಲು ಮಂಗಳವಾರ ಮುಂಜಾನೆ 5.30ರ ವೇಳೆಯಲ್ಲಿ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದೆ. ಆರೋಪಿಯು, ನಾನು ಇದ್ದಲ್ಲಿಗೆ ಬಂದು ಪೈಥಾನ್ಗೆ ಹೋಗುವ ಬಸ್ ಬಂದಿದೆ. ನಿಗದಿತ ಸ್ಥಳದ ಬದಲು ಮತ್ತೊಂದು ಕಡೆ ನಿಂತಿದೆ ಎಂದು ಹೇಳಿ ನಿರ್ಜನ ಪ್ರದೇಶದತ್ತ ಕರೆದೊಯ್ದ. ಆಗ ಇನ್ನೂ ಕತ್ತಲೆಯಿತ್ತು. ಅಲ್ಲಿ ನಿಂತಿದ್ದ ಬಸ್ಗೆ ನನ್ನನ್ನು ಹತ್ತಿಸಿ, ಆತನೂ ಹತ್ತಿದ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ’ ಎಂದು ಮಹಿಳೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಆರೋಪಿಯ ಗುರುತು ಪತ್ತೆಯಾಗಿದೆ. ಆತನ ಬಂಧನಕ್ಕಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್ಆರ್ಟಿಸಿ) ಅತಿದೊಡ್ಡ ಬಸ್ ಜಂಕ್ಷನ್ಗಳಲ್ಲಿ ಸ್ವಾರ್ಗೇಟ್ ಒಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.