ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯನ್ನು ಹಸ್ತಾಂತರಿಸುವ ಮೂಲಕ 'ನಾರಿಶಕ್ತಿ'ಯನ್ನು ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ಇಂದು ಪ್ರಸಾರವಾದ 119ನೇ ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ ಮಹಿಳೆಯರು ಮಾರ್ಚ್ 8ರಂದು (ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ) ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಸಂವಾದ ನಡೆಸಲಿದ್ದಾರೆ. ಈ ಮೂಲಕ ಅವರು ಸಾಧನೆಗೆ ಎದುರಾದ ತೊಡಕುಗಳು ಅದನ್ನು ಮೆಟ್ಟಿ ನಿಂತ ಯಶೋಗಾಥೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
.ಅಭಿಮಾನಿಗಳ ಹೃದಯ ಮರಳಿ ಗೆದ್ದಿದ್ದೇನೆ: ಹಾರ್ದಿಕ್ ಪಾಂಡ್ಯ.ಜಾರ್ಖಂಡ್ನ ನಾಲ್ವರು ಸೇರಿ ಕಾರ್ಮಿಕರ ಸುರಕ್ಷತೆಗಾಗಿ ಒತ್ತಾಯಿಸಿದ ಸಿಎಂ ಸೊರೇನ್.
ಮಹಿಳೆಯರನ್ನು ಗೌರವಿಸೋಣ ಅವರ ಸಾಧನೆಗಳನ್ನು ಸಂಭ್ರಮಿಸೋಣ ಎಂದು ಹೇಳಿರುವ ಮೋದಿ, ವಿವಿಧ ವಲಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಂಖ್ಯೆ ಹೆಚ್ಚಾಗಿರುವುದನ್ನು ಶ್ಲಾಘಿಸಿದ್ದಾರೆ.

ಇದೇ ವೇಳೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜನರು ತಮ್ಮ ಆರೋಗ್ಯದ ಕಾಳಜಿ ಮಾಡುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಮಸ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರು.
.Karnataka Budget 2025 | ಕೋಲಾರ ಜನರ ಕೂಗು ಕೇಳುವುದೇ?.Karnataka Budget 2025 | ತುರುವೇಕೆರೆ: ತೆಂಗು ಸಂಶೋಧನಾ ಕೇಂದ್ರ ಆರಂಭವಾಗಲಿ.ತೆಲಂಗಾಣ ಸುರಂಗ ಕುಸಿತ: ಸಿಲುಕಿರುವವರ ಸಮೀಪಕ್ಕೆ ತಲುಪಿದ ರಕ್ಷಣಾ ತಂಡ.ಅಭ್ಯಾಸಕ್ಕೆ ಬಾಬರ್ ಆಜಂ ಗೈರು:ಏನೇ ಆದರೂ ಭಾರತವನ್ನು ಸೋಲಿಸಿ ಎಂದ ಪಿಸಿಬಿ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.