ರಾಂಚಿ: ತೆಲಂಗಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಲುವೆಯ ಸುರಂಗದ ಮೇಲ್ಫಾವಣಿಯು ಕುಸಿದ ಪರಿಣಾಮ 8 ಮಂದಿ ಕಾರ್ಮಿಕರು ಸಿಲುಕಿಕೊಂಡಿರುವ ಘಟನೆ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಳವಳ ವ್ಯಕ್ತಪಡಿಸಿದ್ದು, ಕಾರ್ಮಿಕರಿಗೆ ಅಗತ್ಯ ನೆರವು ಒದಗಿಸುವಂತೆ ರೇವಂತ್ ರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೊರೇನ್, ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಜಾರ್ಖಂಡ್ನ ನಾಲ್ವರು ಕಾರ್ಮಿಕರು ಸೇರಿದಂತೆ ಎಂಟು ಮಂದಿಯ ಸುರಕ್ಷತೆಗಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಮತ್ತು ಅವಶ್ಯಕವಿದ್ದರೆ ನಮ್ಮ ಸರ್ಕಾರವು ಸಹಾಯಹಸ್ತ ಚಾಚಲಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
.Fire at Chamundi Hills | ಬೆಂಕಿ ರೇಖೆ ನಿರ್ವಹಿಸಿಲ್ಲ: ಆರೋಪ.ಕೊಪ್ಪಳ | ಹಣ್ಣುಗಳ ಮೇಳ: ₹8 ಲಕ್ಷ ಕೆ.ಜಿ.ಯ ರೂಬಿ ರೋಮನ್ ದ್ರಾಕ್ಷಿ ಆಕರ್ಷಣೆ.
ಜಾರ್ಖಂಡ್ ಸರ್ಕಾರವು ತೆಲಂಗಾಣ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದೂ ಸೊರೇನ್ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಂಗದಲ್ಲಿ ಸಿಲುಕಿರುವ ಜಾರ್ಖಂಡ್ನ ನಾಲ್ವರು ಕಾರ್ಮಿಕರು ಗುಮ್ಲಾ ಜಿಲ್ಲೆಗೆ ಸೇರಿದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡ ದಂಡೆ ಕಾಲುವೆಯ (ಎಸ್ಎಲ್ಬಿಸಿ) ಸುರಂಗದ ಮೇಲ್ಫಾವಣಿಯು ಶನಿವಾರ ಕುಸಿದಿದ್ದು, 8 ಮಂದಿ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
.ಗಂಭೀರ ಸ್ಥಿತಿಯಲ್ಲೇ ಮುಂದುವರಿದ ಪೋಪ್ ಫ್ರಾನ್ಸಿಸ್ ಆರೋಗ್ಯ.ನ್ಯೂ ಮೆಕ್ಸಿಕೊದ ಅಮೆರಿಕ ವಾಯುನೆಲೆಯಲ್ಲಿ ಶೂಟೌಟ್: ಒಬ್ಬನ ಸಾವು.ಅಭ್ಯಾಸಕ್ಕೆ ಬಾಬರ್ ಆಜಂ ಗೈರು:ಏನೇ ಆದರೂ ಭಾರತವನ್ನು ಸೋಲಿಸಿ ಎಂದ ಪಿಸಿಬಿ ಅಧ್ಯಕ್ಷ.ತೆಲಂಗಾಣ ಸುರಂಗ ಕುಸಿತ: ಸಿಲುಕಿರುವವರ ಸಮೀಪಕ್ಕೆ ತಲುಪಿದ ರಕ್ಷಣಾ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.