ಕೊಪ್ಪಳ: ತೋಟಗಾರಿಕಾ ಇಲಾಖೆ ಶಿವರಾತ್ರಿ ಅಂಗವಾಗಿ ತನ್ನ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿರುವ ತರಹೇವಾರಿ ಹಣ್ಣುಗಳ ಮೇಳದಲ್ಲಿ ಜಗತ್ತಿನ ದುಬಾರಿ ತಳಿಯ ದ್ರಾಕ್ಷಿ ರೂಬಿ ರೋಮನ್ ಗಮನ ಸೆಳೆಯುತ್ತಿದೆ.

ಜಪಾನ್ ಮೂಲದ ರೂಬಿ ರೋಮನ್ ದ್ರಾಕ್ಷಿಯ ಒಂದು ಕೆ.ಜಿ.ಯ ಬೆಲೆ ₹8 ಲಕ್ಷ ಇದೆ. ಜಿಲ್ಲೆಯ ರೈತರು ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಪೇರಲ, ದಾಳಿಂಬೆ, ಕರಬೂಜ, ಪಪ್ಪಾಯ, ಅಂಜೂರ, ಬಾಳೆ, ಸಪೋಟಾ ಹೀಗೆ ಅನೇಕ ಹಣ್ಣುಗಳು ಮೇಳದಲ್ಲಿವೆ. ಅದರಲ್ಲಿ ರೂಬಿ ಜನರ ಆಕರ್ಷಣೆಯಾಗಿದೆ.

'ರೂಬಿ ರೋಮನ್ ಜಪಾನ್ ಮೂಲದ ತಳಿಯಾಗಿದ್ದು, ಮುಂಬೈನ ವ್ಯಾಪಾರಿಯೊಬ್ಬರ ಮೂಲಕ 250 ಗ್ರಾಂ ಮಾತ್ರ ತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇದೇ ತಳಿ ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲಾಗುವುದು' ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.

ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಣ್ಣುಗಳ ಮೇಳಕ್ಕೆ ಚಾಲನೆ ನೀಡಿದರು. ಭಾನುವಾರ ಆರಂಭವಾದ ಮೇಳ ಐದು ದಿನಗಳ ಕಾಲ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.