
ಮಹಿಳಾ ವಿಶ್ವಕಪ್: ಭಾರತೀಯ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು. ನವೆಂಬರ್ 2 ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ಜಯಗಳಿಸಿತ್ತು.
Instagram/@indiancricketteam

ಪಹಲ್ಗಾಮ್ ದಾಳಿ: ಇದೇ ವರ್ಷ ನಡೆದ ಉಗ್ರದಾಳಿಯಲ್ಲಿ ಕಾಶ್ಮೀರದ ಪಹಲ್ಗಾಮ್ ದಾಳಿ ಹೆಚ್ಚು ಸದ್ದು ಮಾಡಿದ ಸುದ್ದಿಯಾಗಿದೆ. ಈ ದಾಳಿ ವಿಶ್ವದಾದ್ಯಂತ ಸಂಚಲನ ಮೂಡಿಸುವುದರ ಜೊತೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ‘ತನ್ನ ಗಂಡನ ದೇಹದ ಪಕ್ಕದಲ್ಲಿ ಕುಳಿತು ದುಃಖಿಸುತ್ತಿರುವ ಮಹಿಳೆಯನ್ನು ತೋರಿಸುವ ಚಿತ್ರ‘ ವ್ಯಾಪಕವಾಗಿ ಹಂಚಿಕರಯಾದ ಚಿತ್ರವಾಗಿದೆ. ನಾಗರಿಕರ ಮೇಲಾದ ಭೀಕರ ದಾಳಿಗಳಲ್ಲೊಂದು ಎಂಬ ಕುಖ್ಯಾತಿ ಪಡೆದಿದೆ.
ಚಿತ್ರ: ಪಿಟಿಐ

ಆಪರೇಷನ್ ಸಿಂಧೂರ್: ಆಪರೇಷನ್ ಸಿಂಧೂರ್‌ನಲ್ಲೂ ನಾರಿ ಶಕ್ತಿಯ ಪ್ರದರ್ಶನಗೊಂಡಿರುವುದು ಜಗತ್ತು ಕೊಂಡಾಡಿತ್ತು. ಇಡೀ ವಿಶ್ವ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿತು. ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಆಪರೇಷನ್ ಸಿಂಧೂರ್‌ನ ಪತ್ರಿಕಾಗೋಷ್ಠಿ ಮುನ್ನಡೆಸಿದರು. ಭಾರತೀಯ ಸೇನೆ ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ನಡೆಸಿದ ಅಪರೇಷನ್ ಸಿಂಧೂರ್‌ನ ಕಾರ್ಯವೈಖರಿಯನ್ನು ವಿವರಿಸುವ ಮೂಲಕ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವನ್ನು ಸೂಚಿಸಿದವು.
ಚಿತ್ರ: ಪಿಟಿಐ

ಬೋಯಿಂಗ್ ವಿಮಾನ ಅಪಘಾತ: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್‌ಆಫ್ ಆದ 32 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನದ 12 ಸಿಬ್ಬಂದಿ ಹಾಗೂ 229 ಪ್ರಯಾಣಿಕರು ಮೃತಪಟ್ಟರು. ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ವೊಂದರ ಮೇಲೆ ಬಿದ್ದು, 19 ಮಂದಿ ಮೃತಪಟ್ಟರು. 67 ಜನರು ತೀವ್ರವಾಗಿ ಗಾಯಗೊಂಡರು.
ಚಿತ್ರ: ಪಿಟಿಐ

ಶುಭಾಂಶು ಶುಕ್ಲಾ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಸಾಕ್ಷಿಯಾದರು. ನಾಸಾದ ಆಕ್ಸಿಯಮ್ ಮಿಷನ್ 4ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದರು.
X/@mygovindia

ನಾಸಾ ಯಶಸ್ಸು: ನಾಸಾದ ಚಂದ್ರಯಾನ ಕಾರ್ಯಕ್ರಮವಾದ ಇಂಟ್ಯೂಟಿವ್ ಮೆಷಿನ್ಸ್‌ನ ಬ್ಲೂ ಘೋಸ್ಟ್ ಮಿಷನ್ 1 ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಲ್ಯಾಂಡರ್ ಹೆಸರು ‘ಅಥೇನಾ’.
X/@Astro_Mike

ಬಹುಮಹಡಿ ಕಟ್ಟಡ ಬೆಂಕಿಗೆ ಆಹುತಿ: ನವೆಂಬರ್‌ನಲ್ಲಿ ಹಾಂಗ್ ಕಾಂಗ್‌ನ ಬಹುಮಹಡಿ ಕಟ್ಟಡವೊಂದು ಬೆಂಕಿಗೆ ಆಹುತಿಯಾಯಿತು. ಈ ಅವಘಡದಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.
ಚಿತ್ರ: ಏಜೇನ್ಸಿಸ್

ಹಸಿವು: ದಶಕಗಳಷ್ಟು ಹಳೆಯದಾದ ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆಯು ಅಕ್ಟೋಬರ್ 2023 ರಲ್ಲಿ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾಯಿತು. ಈ ವರ್ಷ, ನಿರಂತರ ಹೋರಾಟ ಮತ್ತು ಸಹಾಯ ನಿರ್ಬಂಧಗಳು ಗಾಜಾದಲ್ಲಿ ತೀವು ಹಸಿವಿಗೆ ಕಾರಣವಾಗಿವೆ.
ಚಿತ್ರ: ಏಜೇನ್ಸಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.