ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹರಿಯುವ ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಯಮುನಾ ನದಿಯು ದೆಹಲಿಯ ಹಳೆಯ ರೈಲ್ವೆ ಸೇತುವೆ ಬಳಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ 204.65 ಮೀಟರ್ ಹರಿವು ದಾಖಲಿಸಿದೆ. 204.50 ಮೀಟರ್ ಅನ್ನು ಅಪಾಯದ ಮಟ್ಟ ಎಂದು ಗುರುತಿಸಲಾಗಿತ್ತು.

ಯಮುನಾ ನದಿಯ ಹರಿವಿನ ಮಟ್ಟ ಹಾಗೂ ಪ್ರವಾಹದ ಮುನ್ಸೂಚನೆಯನ್ನು ತಿಳಿದುಕೊಳ್ಳಲು ರೈಲ್ವೆ ಸೇತುವೆಯ ಬಳಿಯ ನದಿಯ ನೀರಿನ ಪ್ರಮಾಣವನ್ನು ಗಮನಿಸಲಾಗುತ್ತಿತ್ತು.

ನದಿನ ಹರಿವು ಹೆಚ್ಚಾಗಲಿದೆ ಎಂದು ಮುನ್ಸೂಚನೆ ಇರುವುದರಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಜೀರಾಬಾದ್ ಮತ್ತು ಹತ್ನಿಕುಂಡ್ ಬ್ಯಾರೇಜ್ನಿಂದ ಪ್ರತಿ ಗಂಟೆಗೊಮ್ಮೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿರುವುದರಿಂದ ನದಿಯ ಹರಿವು ಹೆಚ್ಚಾಗಿರಬಹುದು. ಎರಡೂ ಬ್ಯಾರೇಜ್ಗಳಿಂದ ಕ್ರಮವಾಗಿ 35,130 ಕ್ಯೂಸೆಕ್ ಹಾಗೂ 47,024 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನದಿಯ ಹರಿವು 206 ಮೀ. ದಾಟಿದರೆ ನದಿ ತೀರದ ಜನರನ್ನು ಸ್ಥಳಾಂತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.