ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ಮಾಡೆಲ್ ಜೊತೆ ಜೊಮಾಟೊ ಸ್ಥಾಪಕ ದೀಪಿಂದರ್ ಗೋಯಲ್ ವಿವಾಹ

Published 22 ಮಾರ್ಚ್ 2024, 12:43 IST
Last Updated 22 ಮಾರ್ಚ್ 2024, 12:43 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಡೆಲಿವರಿ ಕಂಪನಿ ಜೊಮಾಟೊ ಸ್ಥಾಪಕ, ಸಿಇಒ ದೀಪಿಂದರ್‌ ಗೋಯಲ್‌ ಅವರು ಮೆಕ್ಸಿಕೊ ಮೂಲದ ರೂಪದರ್ಶಿ, ಉದ್ಯಮಿ ಗ್ರೇಸಿಯಾ ಮುನೋಜ್‌ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋಯಲ್‌ (41) ಅವರು ಇದಕ್ಕೂ ಮುಂಚೆ ಕಾಂಚನಾ ಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಇವರಿಬ್ಬರೂ ದೆಹಲಿಯ ಐಐಟಿಯ ಒಂದೇ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಗ್ರೇಸಿಯಾ ಅವರು ಭಾರತದಲ್ಲಿ ತಮ್ಮದೇ ಆದ ಐಷಾರಾಮಿ ಗ್ರಾಹಕ ಉತ್ಪನ್ನಗಳ ಸ್ವತಂ ನವೋದ್ಯಮವನ್ನು ಹೊಂದಿದ್ದಾರೆ. ಇದರೊಂದಿಗೆ, ಅವರು ರೂಪದರ್ಶಿ ಕೂಡ ಆಗಿದ್ದಾರೆ. ಗ್ರೇಸಿಯಾ ಹಾಗೂ ಗೋಯಲ್‌ ಅವರು ಒಂದೆರೆಡು ತಿಂಗಳುಗಳ ಹಿಂದೆ ವಿವಾಹವಾಗಿದ್ದಾರೆ ಎಂದು ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

ಗ್ರೇಸಿಯಾ ಅವರು ಮೆಕ್ಸಿಕೊನಲ್ಲಿ ಜನಿಸಿದ್ದು, ಪ್ರಸ್ತುತ ಭಾರತದಲ್ಲಿ ತಮ್ಮ ನಿವಾಸವನ್ನು ಹೊಂದಿದ್ದಾರೆ ಎಂದು ಅವರ ಇನ್‌ಸ್ಟಾಗ್ರಾಮ್‌ ಬಯೋದಲ್ಲಿದೆ. ಅಲ್ಲದೆ, ಇವರು 2022ರ ಮೆಟ್ರೋಪಾಲಿಟನ್‌ ಫ್ಯಾಶನ್‌ ವೀಕ್‌ನಲ್ಲಿ ವಿಜೇತರಾಗಿದ್ದರು.

ಇತ್ತೀಚೆಗೆ ಅಷ್ಟೇ ದೀಪಿಂದರ್‌ ಗೋಯಲ್‌ ಅವರ ಜೊಮಾಟೊ ಕಂಪನಿ ಸಸ್ಯಾಹಾರಿಗಳಿಗೆ ‘ಪ್ಯೂರ್‌ ವೆಜ್‌ ಮೋಡ್‌’ ಸೇವೆಗೆ ಚಾಲನೆ ನೀಡಿತ್ತು. ಇದಕ್ಕಾಗಿ ‘ಪ್ಯೂರ್ ವೆಜ್’ನಡಿ ಸಸ್ಯಾಹಾರ ವಿತರಣೆಗೆ ಪ್ರತ್ಯೇಕ ತಂಡ ರಚಿಸಿತ್ತು. ಇದರನ್ವಯ ಶುದ್ಧ ಸಸ್ಯಾಹಾರ ವಿತರಣೆ ಮಾಡುವವರು ಹಸಿರು ಸಮವಸ್ತ್ರ ಧರಿಸಿ, ಹಸಿರು ಬಾಕ್ಸ್‌ಗಳಲ್ಲಿಯೇ ಆಹಾರ ಪೂರೈಸಬೇಕು ಎಂಬ ಆದೇಶವನ್ನು ಹೊರಡಿಸಲಾಗಿತ್ತು.

ಆದರೆ, ಈ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವು ಸೊಸೈಟಿಗಳು ಹಾಗೂ ಗೃಹ ಕ್ಷೇಮಾಭಿವೃದ್ಧಿ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಹಾಗಾಗಿ, ಹಸಿರು ಸಮವಸ್ತ್ರ ಧರಿಸುವಂತೆ ನೀಡಿದ್ದ ಸೂಚನೆಯನ್ನು ಕಂಪನಿಯು ವಾಪಸ್‌ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT