ನವದೆಹಲಿ: ಎವೆಯಿಕ್ಕುವಷ್ಟರಲ್ಲಿ ಅಂತರ್ಜಾಲದ (ಇಂಟೆರ್ನೆಟ್) ಪುಟಗಳು ಪಟಪಟನೆ ತೆರೆದುಕೊಳ್ಳ ಬೇಕು ಎಂಬುದು ಸೈಬರ್ ಬಳಕೆದಾರರ ಆಕಾಂಕ್ಷೆ ಮತ್ತು ನಿರೀಕ್ಷೆ. ಇಂತಹ ನಿರೀಕ್ಷೆಯನ್ನು ತಣಿಸಲು ಬೆಂಗಳೂರಿನ ಭೌತ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ. `ಶುದ್ಧ ವಿಜ್ಞಾನ~ ಸಂಶೋಧಕರ ಈ ಪ್ರಯತ್ನ ಕೈಗೊಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಸೈಬರ್ ಬಳಕೆದಾರರ ಆಕಾಂಕ್ಷೆಯೂ ನನಸಾಗಲಿದೆ.

ಸದ್ಯ ಅಂತರ್ಜಾಲ ತೆರೆದುಕೊಳ್ಳಲು ಅಗತ್ಯವಾದ ದತ್ತಾಂಶಗಳು ಅತ್ಯಂತ ನಂಬಕೆಯಸ್ಥ ಆಪ್ಟಿಕಲ್ ಫೈಬರ್ ಕೇಬಲ್ಗಳ (ಒಎಫ್ಸಿ) ಮೂಲಕ ಹರಿದಾಡುತ್ತಿವೆ.

ಈ ದತ್ತಾಂಶ ವಾಹಕ ಒಎಫ್ಸಿಯನ್ನು ಭವಿಷ್ಯದಲ್ಲಿ ಮತ್ತಷ್ಟು ಸದೃಢಗೊಳಿಸಲು ಭೌತ ವಿಜ್ಞಾನಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ `ಫೊಟೊನಿಕ್ ಕ್ರಿಸ್ಟಲ್ಸ್~ ಎಂಬ ಘನದ ಉತ್ಕೃಷ್ಟ ತಳಿಯನ್ನು ಅನ್ವೇಷಿಸುತ್ತಿದ್ದಾರೆ.

ಈ ಹೊಸ ಮಾರ್ಗವು ಅಂತರ್ಜಾಲದ ಮೂಲ ದ್ರವ್ಯವಾದ ದತ್ತಾಂಶದ ಕೇಂದ್ರವಾಗಲಿದೆ. ಇದರಿಂದ ಅಂತರ್ಜಾಲದ ಪುಟಗಳು ಪಟಪಟನೆ ತೆರೆದುಕೊಳ್ಳುತ್ತವೆ ಎಂಬುದು ಭೌತ ವಿಜ್ಞಾನಗಳ ಅಭಿಪ್ರಾಯ.
ಗಾಜಿನ ಸಣ್ಣ ಸಣ್ಣ ತುಣುಕುಗಳಿಂದ ಸಿದ್ಧಗೊಂಡಿರುವ ಒಎಫ್ಸಿ ಡಿಜಿಟಲ್ ಜಗತ್ತಿನ ನರನಾಡಿಯಾಗಿದೆ.

ಈ ಒಎಫ್ಸಿಗಳು ಹಳೇ ತಾಮ್ರದ ತಂತಿಗಳನ್ನು ಬದಲಿಸಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಆಯಾಮವನ್ನೇ ನೀಡಿವೆ. ಆದರೆ, ಸದಾ ಬದಲಾವಣೆಗೆ ತುಡಿಯುವ ವಿಜ್ಞಾನಿಗಳು ಹೊಸ ತಲೆಮಾರಿಗೆ ಸುಧಾರಿತ ತಂತ್ರಜ್ಞಾನ ನೀಡಬಹುದೇ? ಎಂಬ ಕಾತರದಲ್ಲೇ ಇರುತ್ತಾರೆ. ಇದರ ಪರಿಣಾಮವೇ `ಫೊಟೊನಿಕ್ ಕ್ರಿಸ್ಟಲ್ಸ್~.

ಈ `ಫೊಟೊನಿಕ್ ಕ್ರಿಸ್ಟಲ್ಸ್~ ಎಂಬುದು `ನ್ಯಾನೊ~ ಸಾಮಗ್ರಿಗಳ ಘನ. ಇದು ಬೆಳಕಿನ ಪ್ರತಿಫಲನ ನಿಯಮದಂತೆ ಕಾರ್ಯ ನಿರ್ವಹಿಸುತ್ತದೆ. ಘನದ ಉತ್ಕೃಷ್ಟ ತಳಿಯನ್ನು ಸಿದ್ಧಪಡಿಸಿ, ಹೊಸ ತಲೆಮಾರಿಗೆ ಸುಧಾರಿತ ತಂತ್ರಜ್ಞಾನವನ್ನು ತಾವೇ ಮೊದಲು ನೀಡಬೇಕು ಎಂಬ ಅದಮ್ಯ ಬಯಕೆಯಿಂದ ವಿಜ್ಞಾನಿಗಳು ಪ್ರಯೋಗಾಲಯದೆಡೆಗೆ ಮುಖಮಾಡಿದ್ದಾರೆ.

ಇಂತಹ ಒಂದು ತಂಡ ನಮ್ಮ ಬೆಂಗಳೂರಿನ `ಭಾರತೀಯ ವಿಜ್ಞಾನ ಸಂಸ್ಥೆ~ಯ (ಐಐಎಸ್) ರಾಮನ್ ಸಂಶೋಧನಾ ಕೇಂದ್ರದಲ್ಲಿ ಅವರಿತ ಶ್ರಮಿಸುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ವಿಜ್ಞಾನ ಅಕಾಡೆಮಿಯ ಸಹಕಾರ ಕೂಡ ಇದೆ. ದೇಶ ಮತ್ತು ವಿದೇಶದ ವಿಜ್ಞಾನಿಗಳ ಈ ತಂಡವು, ಈ ``ಫೊಟೊನಿಕ್ ಕ್ರಿಸ್ಟಲ್ಸ್~ ಘನದ ಉತ್ಕೃಷ್ಟ ತಳಿಯನ್ನು ತಯಾರಿಸುವ ಮಾರ್ಗವನ್ನು `ಡಿಎನ್ಎ ಅಣು~ (ಅತೀ ಸಣ್ಣ ಕಣ) ಬಳಸಿಕೊಂಡು ಕಂಡುಹಿಡಿದಿದೆ. ಈ ಭೌತವಿಜ್ಞಾನಿಗಳ ಪ್ರಯೋಗವು `ರಾಷ್ಟ್ರೀಯ ವಿಜ್ಞಾನ ಅಕಾಡೆಮಿ~ಯ ವಾರ್ತಾಪತ್ರದಲ್ಲಿ ಸೋಮವಾರ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.