ನವದೆಹಲಿ (ಪಿಟಿಐ): ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದ ಪೂರಕ ಆರೋಪಪಟ್ಟಿ ಅಂತಿಮಗೊಂಡಿದ್ದು, ಅದರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನಿಕಟವರ್ತಿ ಅಮಿತ್ ಷಾ ಅವರ ಹೆಸರು ಸೇರ್ಪಡೆಯಾಗಿಲ್ಲ ಎನ್ನಲಾಗಿದೆ. ಎನ್ಕೌಂಟರ್ ಪ್ರಕರಣ ನಡೆದಾಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಗುಜರಾತ್ನ ಗೃಹ ಸಚಿವರಾಗಿದ್ದರು.