ಬೆಂಗಳೂರು: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿ, ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಶೇಕಡ 11ರಷ್ಟು ಶಾಸಕರು ಕ್ರಿಮಿನಲ್ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ! ರಾಷ್ಟ್ರೀಯ ಚುನಾವಣಾ ಕಣ್ಗಾವಲು (ಎನ್‌ಇಡಬ್ಲ್ಯೂ) ಮತ್ತು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯಿಂದ ಇದು ಗೊತ್ತಾಗಿದೆ.

ದೆಹಲಿ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ 70 ಶಾಸಕರ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಈ ಮಾಹಿತಿ ಕಲೆಹಾಕಲಾಗಿದೆ. ಎಎಪಿಯಿಂದ 28 ಜನ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂರು ಮಂದಿ ಕ್ರಿಮಿನಲ್ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಬಿಜೆಪಿಯ ಶೇ 55ರಷ್ಟು (17 ಮಂದಿ) ಶಾಸಕರು, ಕಾಂಗ್ರೆಸ್‌ನ ಶೇ 25ರಷ್ಟು (2 ಮಂದಿ) ಶಾಸಕರು ಕ್ರಿಮಿನಲ್ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.

ದೆಹಲಿ ವಿಧಾನಸಭೆಯ ಸದಸ್ಯರ ಸರಾಸರಿ ಆಸ್ತಿ 2008ರಲ್ಲಿ ರೂ 2.94 ಕೋಟಿ ಆಗಿತ್ತು. ಇದು ಈ ಬಾರಿ ರೂ 10.83 ಕೋಟಿಗೆ ಏರಿಕೆ ಕಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ ಕ್ರಮವಾಗಿ ರೂ 12.49 ಕೋಟಿ ಮತ್ತು ರೂ 10.25 ಕೋಟಿ. ಎಎಪಿ ಶಾಸಕರ ಸರಾಸರಿ ಆಸ್ತಿ ರೂ 1.82 ಕೋಟಿ ಮಾತ್ರ.ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ಶಾಸಕರ ಪ್ರಮಾಣ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗಿದೆ. 2008ರಲ್ಲಿ ಆಯ್ಕೆಯಾದ ಶೇ 43ರಷ್ಟು ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದರೆ, ಈ ಬಾರಿ ಅದರ ಪ್ರಮಾಣ ಶೇ 36ಕ್ಕೆ ಇಳಿದಿದೆ.

ಮಧ್ಯಪ್ರದೇಶ: ಕ್ರಿಮಿನಲ್ ಹಿನ್ನೆಲೆಯ ಶಾಸಕರ ಸಂಖ್ಯೆ ಹೆಚ್ಚಳ
ಭೋಪಾಲ್ (ಪಿಟಿಐ): ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆ, ಕಳೆದ ಬಾರಿಗಿಂತ ಈ ಭಾರಿ ಹೆಚ್ಚಾಗಿದೆ.

ಈ ಕುರಿತ ಮಾಹಿತಿಗಳನ್ನು ರಾಷ್ಟ್ರೀಯ ಚುನಾವಣಾ ಕಾವಲು (ಎನ್‌ಇಡಬ್ಲ್ಯೂ) ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ಕಲೆಹಾಕಿದ್ದು, ‘ಒಟ್ಟು 71 ಶಾಸಕರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಇವರಲ್ಲಿ 48 ಮಂದಿ ಬಿಜೆಪಿ ಹಾಗೂ 23 ಮಂದಿ ಕಾಂಗ್ರೆಸ್ಗೆ ಸೇರಿದವರಾಗಿದ್ದಾರೆ. 2008ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಳಂಕಿತರ ಸಂಖ್ಯೆ ಶೇ 6ರಷ್ಟು ಹೆಚ್ಚಾಗಿದೆ’ ಎಂದು ಸಂಸ್ಥೆ ತಿಳಿಸಿದೆ.

ಅಲ್ಲದೆ, ‘ಇವರಲ್ಲಿ 20 ಮಂದಿ ಎರಡನೇ ಬಾರಿಯೂ ಆಯ್ಕೆಯಾಗಿ ದ್ದಾರೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಈ ಕಳಂಕಿತರಿಗೆ ಸರ್ಕಾರದ ಯಾವುದೇ ಸಾಂವಿಧಾನಿಕ ಹುದ್ದೆಗಳನ್ನು ನೀಡಬಾರದು’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಅವರನ್ನು ಎನ್‌ಇಡಬ್ಲ್ಯೂ ಮತ್ತು ಎಡಿಆರ್ ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.