ನವದೆಹಲಿ (ಪಿಟಿಐ): ಫ್ರಾನ್ಸ್ನ ಕ್ಯಾನ್ಸ್ನಲ್ಲಿ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಬಾರಿ ಬಾಲಿವುಡ್ ನಟಿ ಐಶ್ವರ್ಯ ರೈ, ಸೋನಂ ಕಪೂರ್ ಮತ್ತು ಫ್ರೀಡಾ ಪಿಂಟೊ ಪಾಲ್ಗೊಳ್ಳಲಿದ್ದಾರೆ.

ಲೋರಿಯಲ್ ಪ್ರಸಾದನ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಐಶ್ವರ್ಯ ಸತತ ಹತ್ತನೇ ಬಾರಿಗೆ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಅತ್ಯಂತ ಸಂತೋಷವಾಗಿದೆ ಎಂದಿದ್ದಾರೆ. ಕಳೆದ ವರ್ಷ ಐಶ್ವರ್ಯ ಜತೆಗೆ ಸೋನಂ ಕಪೂರ್ ಇದ್ದರು. ಈ ಬಾರಿ ಇವರಿಬ್ಬರ ಜತೆಗೆ ಇನ್ನೊಬ್ಬ ಬೆಡಗಿ ಪ್ರೀಡಾ ಪಿಂಟೊ ಸಹ ಪಾಲ್ಗೊಳ್ಳುತ್ತಿದ್ದಾರೆ.

ಸೋನಂ ಮತ್ತು ಪ್ರೀಡಾ ಜತೆಗೆ ಪಾಲ್ಗೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ಇಬ್ಬರು ಸುಂದರಿಯರ ಜತೆ ಪಾಲ್ಗೊಳ್ಳುವುದಕ್ಕೆ ಹರ್ಷವಾಗಿದೆ ಎಂದು ಐಶ್ವರ್ಯ ತಿಳಿಸಿದ್ದಾರೆ. ಲೋರಿಯಲ್ ಕಂಪೆನಿ ಪರವಾಗಿ 2009ರಲ್ಲಿ ಪಾಲ್ಗೊಳ್ಳುವುದಾಗಿ ಸೋನಂ ಪ್ರಕಟಿಸಿದ ನಂತರ, ಕಂಪೆನಿ ಐಶ್ವರ್ಯ ಅವರನ್ನೇ ಕಳುಹಿಸಲು ತೀರ್ಮಾನಿಸಿತು. ಇದರಿಂದ ಕೆರಳಿದ ಸೋನಂ, ಐಶ್ವರ್ಯ ಅವರನ್ನು ಸಾರ್ವಜನಿಕವಾಗಿ `ಬಚ್ಚನ್ ಬಹು ಆಂಟಿ~ ಎಂದು ಕರೆದಿದ್ದರು. ಆದರೆ ಈ ಬಾರಿ ಪರಿಸ್ಥಿತಿ ತಿಳಿಯಾಗಿದ್ದು, ಇಬ್ಬರೂ ಬೆಡಗಿಯರೂ ಲೋರಿಯಲ್ ಕಂಪೆನಿ ಪರವಾಗಿ ಕಾನ್ಸ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.