ಡೆಹ್ರಾಡೂನ್ (ಪಿಟಿಐ):  ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿನ ಟ್ಯೂನಿ ಮಾರ್ಕೆಟ್ ಎಂಬಲ್ಲಿ ಭಾನುವಾರ ಬಸ್ಸೊಂದು ಉಕ್ಕಿ ಹರಿಯುತ್ತಿದ್ದ ಯಮುನಾ ನದಿಯ ಉಪನದಿ ಟೋನ್ಸ್ ನದಿಯಲ್ಲಿ ಬಿದ್ದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಎಂಟು ಮಂದಿ ಕಾಣೆಯಾಗಿದ್ದಾರೆ.

ಇದುವರೆಗೆ 15 ಶವಗಳು ಪತ್ತೆಯಾಗಿವೆ. ‘ಕಾಣೆಯಾದ ಎಂಟು ವ್ಯಕ್ತಿಗಳ ಶೋಧ ಕಾರ್ಯ ಚುರುಕಿನಿಂದ ನಡೆದಿದೆ ಎಂದು ಜಿಲ್ಲಾಧಿಕಾರಿ ಕುರ್ವೆ ಅವರು ತಿಳಿಸಿದ್ದಾರೆ. ಇದುವರೆಗೆ ನದಿಯಲ್ಲಿ ಬಿದ್ದ ಬಸ್ಸಿನ ಸುಳಿವು ದೊರೆತಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಗಾಯಗೊಂಡಿರುವ 12 ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್ ಕಟ್ಯಾಲ್ ನಿಂದ ಡೆಹ್ರಾಡೂನ್‌ಗೆ ತೆರಳುತ್ತಿತ್ತು. ಚಾಲಕನು ಬಸ್ಸನ್ನು ಕಡಿದಾದ ತಿರುವಿನಲ್ಲಿ ಚಾಲನೆ ಮಾಡುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.