ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಕೊಳವೆಬಾವಿಗೆ ಬಿದ್ದ ಮಗುವಿನ ಸಾವು

110 ಗಂಟೆಗಳ ಕಾರ್ಯಾಚರಣೆ ವಿಫಲ
Last Updated 11 ಜೂನ್ 2019, 18:18 IST
ಅಕ್ಷರ ಗಾತ್ರ

ಸಂಗ್ರೂರ್‌: 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು 110 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಮಂಗಳವಾರ ಹೊರತೆಗೆಯಲಾಗಿದೆ. ಆದರೆ ದುರದೃಷ್ಟವಶಾತ್‌ ಮಗು ಬದುಕಿ ಉಳಿಯಲಿಲ್ಲ ಎಂದು ಅಧಿಕಾರಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾಸ ಪಡೆಯ ಸದಸ್ಯರು ಮಂಗಳವಾರ ಬೆಳಿಗ್ಗೆ ಸುಮಾರು 5.30ಕ್ಕೆ ಮಗು ಫತೇವೀರ್‌ ಸಿಂಗ್‌ ನನ್ನು ಹೊರತೆಗೆದಿದ್ದು, ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ(ಪಿಸಿಐಎಂಇಆರ್‌)ಗೆ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಯಿತು ಎಂದು ಸಂಗ್ರೂರು ಜಿಲ್ಲಾಧಿಕಾರಿ ಘನಶ್ಯಾಮ್‌ ಥೋರಿ ತಿಳಿಸಿದ್ದರೆ. ಆದರೆ ಮಗು ಸತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಸಂ್ಥೆಯ ವೈದ್ಯಕೀಯ ಅಧೀಕ್ಷಕ ಎ.ಕೆ. ಗುಪ್ತಾ ಹೇಳಿದರು.

ಗುರುವಾರ ಸಂಜೆ ಆಟವಾಡಿಕೊಳ್ಳುತ್ತಿದ್ದಾಗ ಪುಟಾಣಿ ಫತೇವೀರ್‌ 125 ಅಡಿ ಆಳದ ಏಳು ಇಂಚು ಅಗಲದ, ಬಳಕೆಯಲ್ಲಿಲ್ಲದ ಕೊಳವೆಬಾವಿಗೆ ಬಿದ್ದಿದ್ದ. ಆಟದ ಮೈದಾನದಲ್ಲಿದ್ದ ಕೊಳವೆಬಾಯಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು.ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯಾಚರಣೆ ನಡೆಸದೇ ದೀರ್ಘ ಕಾಲ ತೆಗೆದುಕೊಂಡಿದ್ದರಿಂದ ಮಗು ಸಾಯಬೇಕಾಯಿತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ‘ಫತೇವೀರ್‌ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಅವನ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೊರೆಯಲಿ. ಜಿಲ್ಲೆಯಲ್ಲಿ ತೆರೆದ ಕೊಳವೆಬಾಯಿಗಳಿರುವ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ದೀರ್ಘ ಕಾರ್ಯಾಚರಣೆಯ ಬಗ್ಗೆಸೋಮವಾರವೇ ಟೀಕೆಗಳು ವ್ಯಕ್ತವಾಗಿದ್ದವು. ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT