ನವದೆಹಲಿ : ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ 12 ಹೊಸ ತಳಿಯ ಕಪ್ಪೆಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿ ಎರಡು ಪ್ರಬೇಧಗಳ ಕಪ್ಪೆಗಳು ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡು ಬಂದಿವೆ.

ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಗಳ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ವಿಜ್ಞಾನಿಗಳು ದಶಕಗಳ ಕಾಲ ನಡೆಸಿದ ಸಂಶೋಧನೆಯಲ್ಲಿ ಈ ತಳಿಗಳನ್ನು ಗುರುತಿಸಲಾಗಿದೆ.

`ಕೆಂಫೋಲೆ ನೈಟ್ ಫ್ರಾಗ್ಸ್~ ಮತ್ತು `ಫಾರೆಸ್ಟ್ ನೈಟ್ ಫ್ರಾಗ್ಸ್~ ಜಾತಿಯ ಕಪ್ಪೆಗಳು 75 ವರ್ಷಗಳಿಂದ ಕಣ್ಮರೆಯಾಗಿದ್ದವು. ಅಂತೆಯೇ `ಕೂರ್ಗ್‌ನೈಟ್ ಫ್ರಾಗ್ಸ್~ ತಳಿಗಳ ಕಪ್ಪೆಗಳು 91 ವರ್ಷಗಳಿಂದ ಕಂಡು ಬಂದಿರಲಿಲ್ಲ. ಈಗ ಇವುಗಳನ್ನು ಪತ್ತೆಹಚ್ಚಲಾಗಿದೆ ಎಂದು ಸಂಶೋಧನೆ ನಡೆಸಿದ ತಂಡದ ದೆಹಲಿಯ ವಿಜ್ಞಾನಿ ಎಸ್.ಡಿ.ಬಿಜು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಈಗ ಕಂಡುಹಿಡಿಯಲಾಗಿರುವ ಹೊಸ ಪ್ರಬೇಧಗಳ ಕಪ್ಪೆಗಳು 1920 ಮತ್ತು 1937ರ ಆಸುಪಾಸಿನಲ್ಲಿ ಇದ್ದವು. ಆದರೆ ದಶಕಗಳ ಕಾಲದಿಂದ ಇವುಗಳ ಮೂಲ ಅಸ್ತಿತ್ವ ಗುರುತಿಸಲು ಸಾಧ್ಯವಾಗಿರಲಿಲ್ಲ ಎಂದು ಬೆಂಗಳೂರಿನ ಜೀವಶಾಸ್ತ್ರಜ್ಞ ಸಿ.ಆರ್.ನಾರಾಯಣ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

ಈಗ ಪತ್ತೆಹಚ್ಚಲಾಗಿರುವ ಕಪ್ಪೆಗಳಲ್ಲಿ ಕೆಲವು ತಳಿಗಳ ಕಪ್ಪೆಗಳು ಯಾವುದೇ ದೈಹಿಕ ಸಂಪರ್ಕವಿಲ್ಲದೆಯೇ ಸಂತಾನೋತ್ಪತ್ತಿಯಲ್ಲಿ ತೊಡಗುವ ವಿಶೇಷತೆ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.