ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ಅಡುಗೆ ಮಾಡುವ ಮೂಲಕ ಶಿಕ್ಷಣ ಸಂಸ್ಥೆಯ ನಿಯಮ ಉಲ್ಲಂಘಿಸಿದ ನಾಲ್ವರ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ.

ವಿಶ್ವ ವಿದ್ಯಾನಿಲಯದ ಪ್ರಧಾನ ಶಿಸ್ತು ಪಾಲಕ ಕೌಶಲ್ ಕುಮಾರ್ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿದ್ದು, ಜೂನ್ ತಿಂಗಳಲ್ಲಿ ಅಡ್ಮಿನ್ ಬ್ಲಾಕ್ ಬಳಿ ಬಿರಿಯಾನಿ ತಯಾರಿಸಿದ ವಿದ್ಯಾರ್ಥಿಗಳಿಗೆ ₹6000 ದಿಂದ ₹10,000 ವರೆಗೆ ದಂಡ ವಿಧಿಸಲಾಗಿದೆ.

ಅಡ್ಮಿನ್ ಬ್ಲಾಕ್‍ನ ಮೆಟ್ಟಿಲು ಬಳಿ ಬಿರಿಯಾನಿ ತಯಾರಿಸಿ ಇತರ ವಿದ್ಯಾರ್ಥಿಗಳೊಂದಿಗೆ ತಿಂದು ನೀವು ತಪ್ಪೆಸಗಿದ್ದೀರಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಹಾಗಾಗಿ ನಿಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ.

ಇನ್ನು ಮುಂದೆ ಇದೇ ಕೃತ್ಯವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿರುವ ವಿವಿ, 10 ದಿನಗಳೊಳಗೆ ದಂಡ ಪಾವತಿಸಲು ಕಾಲಾವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.