ಭುವನೇಶ್ವರ್, ಒಡಿಶಾ (ಪಿಟಿಐ): ಭೂಸ್ವಾಧೀನ ಮಸೂದೆ... ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್–ಬಿಜೆಪಿ ನಡುವೆ ಸತತ ವಾಗ್ಯುದ್ಧಕ್ಕೆ ಗ್ರಾಸ ಒದಗಿಸಿರುವ ವಿವಾದಾತ್ಮಕ ವಿಷಯ. ಕಳೆದ ಯುಪಿಎ ಅವಧಿಯಲ್ಲಿ ಅರಣ್ಯ ಖಾತೆಯನ್ನು ನಿರ್ವಹಿಸಿದ್ದ ಜಯರಾಂ ರಮೇಶ್ ಅವರು ಮಸೂದೆಯನ್ನು ಒಟ್ಟಾರೆಯಾಗಿ ವಿರೋಧಿಸಲು ಐದು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವು ಇಂತಿವೆ.

1) ಆದಿಮ ಕಾಯ್ದೆಯಡಿ ಭೂಸ್ವಾಧೀನಕ್ಕೂ ಮುನ್ನ ಶೇಕಡ 80ರಷ್ಟು ಜನರ ಒಪ್ಪಿಗೆ ಪಡೆಯುವ ನಿಯಮವಿದೆ. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೈಬಿಡಲಾಗಿದೆ. ಮಾಲೀಕರ ಅನುಮತಿ ಇಲ್ಲದೇ ಸರ್ಕಾರವು ಖಾಸಗಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬಹುದು.

2) 2013ರ ಭೂಸ್ವಾಧೀನ ಕಾಯ್ದೆಯನ್ವಯ ಆರು ತಿಂಗಳ ಒಳಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಅಂದರೆ, ಭೂ ಸ್ವಾಧೀನಕ್ಕೂ ಮುನ್ನ ಗ್ರಾಮಸಭೆ/ಹಳ್ಳಿ ಸಭೆಯ (ಎಸ್‌ಐಎ) ಅಭಿಪ್ರಾಯಗಳನ್ನು ಪಡೆಯಬೇಕು. ಆದರೆ, ತಿದ್ದುಪಡಿ ಮಸೂದೆಯಲ್ಲಿ ಎಸ್ಐಎಯನ್ನು ಗಾಳಿಗೆ ತೂರಲಾಗಿದ್ದು, ಬಹು ಬೆಳೆಯ ಕೃಷಿ ಭೂಮಿಯನ್ನೂ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಲ್ಲದು. ಅಲ್ಲದೇ, ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬಲ್ಲದು.

3) 2013ರ ಭೂಸ್ವಾಧೀನ ಕಾಯ್ದೆಯನ್ವಯ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಐದುವರ್ಷಗಳಲ್ಲಿ ಉಪಯೋಗಿಸದಿದ್ದಲ್ಲಿ ಅದನ್ನು ರೈತರಿಗೆ ಮರಳಿಸುವ ನಿಯಮವಿದೆ. ಆದರೆ ತಿದ್ದುಪಡಿ ಮಸೂದೆಯಲ್ಲಿ ಅಂಥ ಯಾವುದೇ ಪ್ರಸ್ತಾಪವಿಲ್ಲ.

4) 2013ರ ಭೂಸ್ವಾಧೀನ ಕಾಯ್ದೆಯನ್ವಯ ಕೈಗಾರಿಕಾ ಕಾರಿಡಾರ್‌ಗಳಿಗಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಿಮಯವಿದೆ. ಆದರೆ ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಕಾರಿಡಾರ್‌ನ ಎರಡೂ ಬದಿಗೆ ಒಂದು ಕಿಲೋ ಮೀಟರ್ ವರೆಗೂ ಭೂ ಸ್ವಾಧೀನಕ್ಕೆ ಅವಕಾಶದ ಜತೆಗೆ ಅದನ್ನು ಬಿಲ್ಡರ್‌ಗಳಿಗೆ ಹಾಗೂ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ನೀಡುವ ಪ್ರಸ್ತಾಪವಿದೆ.

5) ಭೂಮಿಯನ್ನು ಕಳೆದುಕೊಂಡವರಿಗೆ 1984ರ ಕಾಯ್ದೆಯ ನಿಯಮಗಳಡಿ ಪರಿಹಾರ ಸಿಗದಿದ್ದಲ್ಲಿ ಅದರ ನಾಲ್ಕು ಪಟ್ಟು ಪರಿಹಾರವನ್ನು ಒದಗಿಸುವ ನಿಯಮವು 2013ರ ಭೂಸ್ವಾಧೀನ ಕಾಯ್ದೆಯಲ್ಲಿದೆ. ಆದರೆ, ಈ ನಿಯಮವನ್ನು ತಿದ್ದುಪಡಿಯಲ್ಲಿ ಮಸೂದೆಯಿಂದ ತೆಗೆದು ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.