ನವದೆಹಲಿ (ಪಿಟಿಐ): ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕೆ.ಜಿ. ಬಾಲಕೃಷ್ಣನ್ ಮತ್ತು ಅವರ ಸಂಬಂಧಿಗಳು, ಬಾಲಕೃಷ್ಣನ್ ನ್ಯಾಯಾಧೀಶರಾಗಿದ್ದ ಕಾಲಾವಧಿಯಲ್ಲಿ ಮಿತಿ ಮೀರಿ ಸಂಪತ್ತು ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಾನು ತನಿಖೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಜೊತೆಗೆ ತನಿಖೆಯ ಸ್ಥಿತಿಗತಿ ಕುರಿತ ವರದಿಯನ್ನೂ ಮೊಹರಾದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತು.

ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಮತ್ತು ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರು ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ಬಾಲಕೃಷ್ಣನ್ ಅವರ ಇಬ್ಬರು ಅಳಿಯಂದಿರು ಹಾಗೂ ಒಬ್ಬ ಸಹೋದರನ ಆಸ್ತಿ ಪಾಸ್ತಿ ಅಂದಾಜು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವಿವರಿಸಿದರು.

ವರದಿಯನ್ನು ಗಮನಿಸಿದ ಬಳಿಕ ಪೀಠವು ~ಸರ್ಕಾರವು ಮಾಜಿ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರವು ಮುಂದೇನು ಕ್ರಮ ಕೈಗೊಳ್ಳಲು ಉದ್ದೇಶಿಸಿದೆ ಎಂದು ಪ್ರಶ್ನಿಸಿತು.

ವಿಷಯಕ್ಕೆ ಸಂಬಂಧಿಸಿದಂತ ಕೈಗೊಳ್ಳಲು ಉದ್ದೇಶಿಸಿರುವ ಮುಂದಿನ ಕ್ರಮವನ್ನು ವಿವರಿಸಲು ಪೀಠವು ಸರ್ಕಾರಕ್ಕೆ ಮೂರು ವಾರಗಳ ಗಡುವು ನೀಡಿತು. ಸಿವಿಲ್ ಸೊಸೈಟಿ ಕಾಮನ್ ಕಾಸ್ ಸಂಸ್ಥೆಯು ಈ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.