ನವದೆಹಲಿ (ಪಿಟಿಐ): ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ಪತ್ತೆ ಶೋಧ ಕಾರ್ಯಾಚರಣೆಯಲ್ಲಿ ಕೈಗೂಡಿಸಿರುವ ಭಾರತವು ಮಲೇಷ್ಯಾ ಸರ್ಕಾರದಿಂದ ಬರುವ ಹೊಸ ಸೂಚನೆಗಳ ನಿರೀಕ್ಷೆಯಲ್ಲಿ ಭಾನುವಾರ ಶೋಧ ಕಾರ್ಯ ಸ್ಥಗಿತಗೊಳಿಸಿದೆ.

ಶೋಧನಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ಐದು ಸಮರನೌಕೆಗಳು ಮತ್ತು ಆರು ಕಣ್ಗಾವಲು ವಿಮಾನಗಳು ಸಧ್ಯ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. `ಮಲೇಷ್ಯಾ ಸರ್ಕಾರದ ಬರುವ ಹೊಸ ಸೂಚನೆಗಳಿಗಾಗಿ ನಾವು ಕಾಯುತ್ತಿದ್ದೇವೆ' ಎಂದು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ವಕ್ತಾರ ಕರ್ನಲ್ ಹರ್ಮಿತ್ ಸಿಂಗ್ ಹೇಳಿದರು.

ಭಾರತವು ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಗೆ ಸೇರಿದ ಸುಮಾರು 2.5ಲಕ್ಷ ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ವಿಮಾನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದೆ.

ಶನಿವಾರವಷ್ಟೇ ಮಲೇಷ್ಯಾ ಸರ್ಕಾರವು ನಾಪತ್ತೆಯಾಗಿರುವ ವಿಮಾನವನ್ನು ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.

ನಾಪತ್ತೆಯಾಗಿರುವ ಬೋಯಿಂಗ್ 777-200 ಇಆರ್ ವಿಮಾನದಲ್ಲಿ 12 ಸಿಬ್ಬಂದಿ ವರ್ಗದವರು ಮತ್ತು 227 ಪ್ರಯಾಣಿಕರು ಸೇರಿ 239 ಜನರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.