ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಡ್ಡಾಯ ಇಲ್ಲ: ಸ್ಮೃತಿ ಇರಾನಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಿಕ್ಷಣವನ್ನು ಕೇಸ­ರೀ­ಕರಣ ಮಾಡಲಾ­ಗುತ್ತಿದೆ ಎಂಬ ಆರೋಪ­ ಅಲ್ಲಗಳೆ­ದಿರುವ ಮಾನವ ಸಂಪ­ನ್ಮೂಲ ಅಭಿ­ವೃದ್ಧಿ ಸಚಿವೆ ಸ್ಮೃತಿ ಇರಾನಿ, ಪಠ್ಯದಲ್ಲಿ ಸಂಸ್ಕೃತ ಕಡ್ಡಾಯ­ಗೊಳಿಸುವ ಬೇಡಿಕೆ­ಯನ್ನೂ ಸ್ಪಷ್ಟ­ವಾಗಿ ತಳ್ಳಿಹಾಕಿ­ದ್ದಾರೆ.

ಸುದ್ದಿಸಂಸ್ಥೆಯಲ್ಲಿ ಭಾನುವಾರ  ನಡೆದ ಸಂವಾದ­ದಲ್ಲಿ ಮಾತನಾಡಿ, ‘ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ­ವಾಡ ಅಥವಾ ಪ್ರತಿನಿಧಿ ಎಂದು ಆರೋಪ ಮಾಡುವ ವ್ಯಕ್ತಿಗಳು ನಾವು ಮಾಡಿ­ರುವ ಒಳ್ಳೆಯ ಕೆಲಸ ಮರೆ­ಮಾಚಲು ಈ ರೀತಿ ದಿಕ್ಕು­ತಪ್ಪಿಸುವ ಹೇಳಿಕೆ ನೀಡುತ್ತಿ­ದ್ದಾರೆ’ ಎಂದು ಆರೋಪಿ­ಸಿದರು.

ಕೇಂದ್ರೀಯ ವಿದ್ಯಾಲಯಗಳ ಪಠ್ಯ­ದಲ್ಲಿ ಜರ್ಮನ್‌ ಭಾಷೆ ಬದಲಿಗೆ ಸಂಸ್ಕೃತವನ್ನು ಅಳವಡಿಸುವ ವಿವಾದಿತ ನಿರ್ಧಾರದ ಬಗ್ಗೆ

ರಾಯಭಾರಿ ನಡವಳಿಕೆಗೆ ಸರ್ಕಾರ ಕೆಂಗಣ್ಣು
500 ಕೇಂದ್ರೀಯ ವಿದ್ಯಾಲಯಗಳಲ್ಲಿ ತೃತೀಯ ಭಾಷೆ­ಯನ್ನಾಗಿ ಜರ್ಮನ್‌ ಬದಲು ಸಂಸ್ಕೃತವನ್ನು ಕಲಿಸಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಭಾರತ­ದಲ್ಲಿರುವ ಜರ್ಮನಿ ರಾಯ­ಭಾರಿ ಮೈಕೆಲ್‌ ಸ್ಟೈನರ್‌ ಅವರು ನಡೆದುಕೊಂಡ ರೀತಿ ವಿವಾದಕ್ಕೆ ಎಡೆಮಾಡಿ­ಕೊಟ್ಟಿದೆ.
ಸರ್ಕಾರದ ಈ ನಿರ್ಧಾರದ ಬಳಿಕ ಮೈಕೆಲ್‌ ಅವರು ಸಂಸ್ಕೃತ ಶಿಕ್ಷಕ ಸಂಘ, ಹಾಗೂ ಖಾಸಗಿ ಶಾಲೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿದ್ದರು. ರಾಯ­ಭಾರಿ­ಯೊಬ್ಬರು ಈ ರೀತಿ ನಡೆದು­ಕೊಂಡಿರುವುದು ಅನಪೇಕ್ಷಿತ ನಡವಳಿಕೆ ಎಂಬ ಆಕ್ಷೇಪ ಕೇಳಿ ಬಂದಿದೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘೨೦೧೧ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಜರ್ಮನ್‌ ಭಾಷೆ ಬೋಧ­ನೆಯು ಸಂವಿಧಾನದ ಉಲ್ಲಂಘ­ನೆ­­­ಯಾಗಿದೆ. ಈ ಒಪ್ಪಂದಕ್ಕೆ ಹೇಗೆ ಸಹಿ ಹಾಕ­ಲಾಯಿತು ಎನ್ನುವುದನ್ನು ತನಿಖೆಗೆ ಒಳಪಡಿಸಲಾಗುತ್ತಿದೆ’ ಎಂದರು.

ಸಂಸ್ಕೃತವನ್ನು ಕಡ್ಡಾಯ ಭಾಷೆಯಾ­ಯನ್ನಾಗಿ ಮಾಡಬೇಕೆನ್ನುವ ಬೇಡಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ಸಂವಿಧಾನದ ೮ನೇ ಅನುಸೂಚಿಯಲ್ಲಿ ಸೇರಿಸಲಾದ ಭಾರ­ತದ  ೨೩ ಭಾಷೆಗಳಲ್ಲಿ ಯಾವುದ­ನ್ನಾದರೂ ಆಯ್ಕೆ ಮಾಡಿಕೊಳ್ಳಬ­ಹುದು’ ಎಂದು ಹೇಳಿದರು.

ಜರ್ಮನ್‌ ಭಾಷೆಯನ್ನು ವಿದೇಶಿ ಭಾಷೆಯನ್ನಾಗಿ ಕಲಿಸುವುದು ಮುಂದು­ವರಿ­ಯುತ್ತದೆ ಎಂದೂ ಅವರು ಪುನರು­ಚ್ಚರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT