ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಪಾನ್- ಆಧಾರ್ ಲಿಂಕ್ ಮಾಡಿಸದಿದ್ದರೆ ₹10 ಸಾವಿರ ದಂಡ

Published 29 ಜೂನ್ 2023, 15:31 IST
Last Updated 29 ಜೂನ್ 2023, 15:31 IST
ಅಕ್ಷರ ಗಾತ್ರ

ಪಾನ್ ಕಾರ್ಡ್‌ ಜೊತೆಗೆ ಆಧಾರ್ ಜೋಡಿಸಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ಪಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆಗೆ ಕೊನೇ ದಿನಾಂಕವನ್ನು ಕೇಂದ್ರ ಹಣಕಾಸು ಇಲಾಖೆಯು ಈ ಹಿಂದೆ ಮಾರ್ಚ್‌ 31ಕ್ಕೆ ನಿಗದಿ ಮಾಡಿತ್ತು. ಆದರೆ ಲೋಕಸಭೆಯಲ್ಲಿ ವಿರೋದ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ದಿನಾಂಕವನ್ನು ಜೂ.30 ರವರೆಗೆ ವಿಸ್ತರಿಸಲಾಗಿತ್ತು. ಜೂ.30 ರ ಒಳಗೆ ಪ್ಯಾನ್–ಆಧಾರ್ ಜೋಡಿಸದಿದ್ದರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು 10 ಸಾವಿರ ರೂಪಾಯಿ ವಿಧಿಸಲಿದೆ. ಇಲ್ಲವೇ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT