ಬೆಂಗಳೂರು: ವರ್ಷಾಂತ್ಯದ ದಿನವಾದ ಶನಿವಾರ 116 ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಬಹುತೇಕ ಅಧಿಕಾರಿಗಳನ್ನು ಹಿಂದೆ ಇದ್ದ ಸ್ಥಾನದಲ್ಲೇ ಮುಂದುವರಿಸಿದ್ದು, ಕೆಲವರನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ.

ಒಟ್ಟು 42 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್.ಆರ್. ಉಮಾಶಂಕರ್ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗೆ ಬಡ್ತಿ ನೀಡಿ, ಹಾಲಿ ಇರುವ ಸ್ಥಾನಗಳಲ್ಲೇ ಮುಂದುವರಿಸಲಾಗಿದೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಅಶ್ವಿಜಾ ಬಿ.ವಿ. ಅವರಿಗೆ ಸೀನಿಯರ್ ಟೈಂ ವೇತನ ಶ್ರೇಣಿಗೆ ಬಡ್ತಿ ನೀಡಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

52 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ: ವಿವಿಧ ಶ್ರೇಣಿಯ 52 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಅಮರ್ ಕುಮಾರ್ ಪಾಂಡೆ ಅವರ ವಯೋನಿವೃತ್ತಿಯಿಂದ ತೆರವಾದ ಗೃಹರಕ್ಷಕ ದಳ, ನಾಗರಿಕ ರಕ್ಷಣೆ ಮತ್ತು ಅಗ್ನಿಶಾಮಕ ಇಲಾಖೆಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಂದಿಖಾನೆ ಡಿಜಿಪಿ ಅಲೋಕ್ ಮೋಹನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಡ್ತಿಯೊಂದಿಗೆ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ವಿವರ: ಮನೀಷ್ ಖರ್ಬೀಕರ್– ಬಂದಿಖಾನೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ; ಸೌಮೇಂದು ಮುಖರ್ಜಿ– ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಸಂವಹನ, ಸಾರಿಗೆ ಮತ್ತು ಆಧುನೀಕರಣ; ಎಂ.ಚಂದ್ರಶೇಖರ್– ಹೆಚ್ಚುವರಿ ಪೊಲೀಸ್ ಕಮಿಷನರ್, ಬೆಂಗಳೂರು ನಗರ ಪೂರ್ವ; ಎನ್. ಸತೀಶ್ ಕುಮಾರ್– ಐಜಿಪಿ ಉತ್ತರ ವಲಯ; ರಮಣ ಗುಪ್ತ– ಐಜಿಪಿ, ಉತ್ತರ ವಲಯ, ಬೆಳಗಾವಿ; ಬಿ.ಆರ್. ರವಿಕಾಂತೇಗೌಡ– ಐಜಿಪಿ, ಕೇಂದ್ರ ವಲಯ, ಬೆಂಗಳೂರು; ಇಡಾ ಮಾರ್ಟಿನ್ ಮಾರ್ಬೆನ್ಯಾಂಗ್– ಡಿಐಜಿ, ನೇಮಕಾತಿ; ವಿಕ್ರಮ್ ಅಮಠೆ– ಎಸ್‌ಪಿ, ಗುಪ್ತಚರ ವಿಭಾಗ; ಮಹಾನಿಂಗ್ ನಂದಗಾವಿ– ಎಸ್‌ಪಿ, ಗುಪ್ತಚರ ವಿಭಾಗ.

ವನ್ಯಜೀವಿ ವಿಭಾಗದ ಮುಖ್ಯಸ್ಥರಾಗಿ ರಾಜೀವ್ ರಂಜನ್

ವಿವಿಧ ಶ್ರೇಣಿಯ 22 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಬಡ್ತಿ ಪಡೆದವರಲ್ಲಿ ಕೆಲವರು ಮತ್ತು ಬಡ್ತಿಯಿಂದ ತೆರವಾದ ಹುದ್ದೆಗಳಿಗೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 1987ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ರಾಜೀವ್ ರಂಜನ್ ಅವರನ್ನು ವನ್ಯಜೀವಿ ವಿಭಾಗದ ಮುಖ್ಯಸ್ಥ ಮತ್ತು ಮುಖ್ಯ ವೈಲ್ಡ್‌ಲೈಫ್ ವಾರ್ಡನ್ ಹುದ್ದೆಗೆ ನೇಮಿಸಲಾಗಿದೆ.

ಬೃಜೇಶ್ ಕುಮಾರ್ ದೀಕ್ಷಿತ್ ಅವರನ್ನು ಅರಣ್ಯ ಅಭಿವೃದ್ಧಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸ್ಮಿತಾ ಬಿಜ್ಜೂರ್ ಅವರನ್ನು ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬಡ್ತಿಯೊಂದಿಗೆ ವರ್ಗಾವಣೆ ವಿವರ: ಮೀನಾಕ್ಷಿ ನೇಗಿ– ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ, ತರಬೇತಿ ಮತ್ತು ಹವಾಮಾನ ಬದಲಾವಣೆ; ಕಮಲಾ ಕೆ.– ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ವಿಭಾಗ, ಧಾರವಾಡ; ಕರಿಕಾಳನ್ ವಿ.– ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯಯೋಜನೆ, ಎಸ್. ರಮೇಶ್– ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ವಿಭಾಗ, ಮಡಿಕೇರಿ; ಚಂದ್ರಶೇಖರನಾಯಕ ಕೆ.– ಅರಣ್ಯ ಸಂರಕ್ಷಣಾಧಿಕಾರಿ ಬಜೆಟ್ ಮತ್ತು ಲೆಕ್ಕಪರಿಶೋಧನೆ, ಬೆಂಗಳೂರು; ಧಾರವಾಡ; ಕಾವ್ಯಾ ಚತುರ್ವೇದಿ– ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪಳ; ಸೌರಭ್ ಕುಮಾರ್– ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವನ್ಯಜೀವಿ ವಿಭಾಗ; ಕಾಜೋಲ್ ಅಜಿತ್ ಪಾಟೀಲ್– ಉಪ ಅರಣ್ಯ ಸಂರಕ್ಷಣಾಧಿಕಾರಿ, ಯಾದಗಿರಿ;

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.