ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ₹ 137 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

50,083 ಹೆಕ್ಟೇರ್‌ನಲ್ಲಿ ತರಕಾರಿ ಹಾಗೂ 41,054 ಹೆಕ್ಟೇರ್‌ನಲ್ಲಿ ಹಣ್ಣು ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ ₹ 15 ಸಾವಿರದಂತೆ ಪರಿಹಾರ ಸಿಗಲಿದೆ.

ಬಾಳೆ, ಪಪ್ಪಾಯ, ಟೇಬಲ್ ದಾಕ್ಷಿ, ಅಂಜೂರ, ಅನಾನಸ್, ಕಲ್ಲಂಗಡಿ, ಕರಬೂಜ, ಬೋರೆ, ಬೆಣ್ಣೆಹಣ್ಣು ಬೆಳೆಗಾರರಿಗೆ ಹಾಗೂ ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪು, ಹೀರೆಕಾಯಿ, ತೊಂಡೆಕಾಯಿ ಬೆಳೆದ ರೈತರಿಗೆ ಈ ಪರಿಹಾರ ಸಿಗಲಿದೆ.

ವಿದ್ಯುತ್ ಮಗ್ಗಕ್ಕೆ ₹ 25 ಕೋಟಿ: ಈ ಹಿಂದೆ ಪರಿಹಾರ ಘೋಷಿಸುವಾಗ ಕೈಮಗ್ಗ ನೇಕಾರರಿಗೆ ತಲಾ ₹ 2 ಸಾವಿರದಂತೆ ನೀಡಲು ನಿರ್ಧರಿಸಲಾಗಿತ್ತು. ಅದನ್ನು 1.25 ಲಕ್ಷ ವಿದ್ಯುತ್ ಚಾಲಿತ ಘಟಕಗಳ ಎಲ್ಲ ಕೂಲಿ ಕಾರ್ಮಿಕರಿಗೆ ವಿಸ್ತರಿಸಿದ್ದು, ಇದಕ್ಕಾಗಿ ₹ 25 ಕೋಟಿ ನೀಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.