ಬೆಂಗಳೂರು: ವೈದ್ಯಕೀಯ ಪದವಿ ವಿಭಾಗದಲ್ಲಿ 411 ಸೀಟುಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಂದೆರಡು ದಿನಗಳಲ್ಲಿ ಇನ್ನೂ 287 ಸೀಟುಗಳು ಲಭ್ಯವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇದೇ 2ರಂದು ಆನ್ಲೈನ್ ಕೌನ್ಸೆಲಿಂಗ್ ಆರಂಭವಾದಾಗ ವೈದ್ಯಕೀಯ ವಿಭಾಗದಲ್ಲಿ 1,678 ಸೀಟುಗಳು ಲಭ್ಯವಿದ್ದವು. ಗುರುವಾರ 416 ಸೀಟುಗಳು ಸೇರ್ಪಡೆ ಆಗಿರುವುದರಿಂದ ಈಗ ಒಟ್ಟು ಸೀಟುಗಳ ಸಂಖ್ಯೆ 2,094ಕ್ಕೆ ಏರಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆನ್ಲೈನ್ ಮೂಲಕ ಆದ್ಯತೆ ಮೇಲೆ ಸೀಟುಗಳನ್ನು ಗುರುತಿಸಲು ಇದೇ 7ರವರೆಗೆ ಅವಕಾಶ ಇದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಮೊದಲ ಸುತ್ತಿಗೆ ಇನ್ನೂ 287 ಸೀಟುಗಳು ಲಭ್ಯವಾಗಲಿದ್ದು, ಒಟ್ಟಾರೆ 2,381 ವೈದ್ಯಕೀಯ ಸೀಟುಗಳು ದೊರೆಯಲಿವೆ. ಇದಲ್ಲದೆ ಎರಡನೇ ಸುತ್ತಿಗೆ ಇನ್ನೂ 61 ಸೀಟುಗಳು ಲಭ್ಯವಾಗಲಿವೆ ಎಂದರು.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ರಾಯಚೂರು ಹಾಗೂ ಬೀದರ್ ವೈದ್ಯಕೀಯ ಕಾಲೇಜುಗಳಲ್ಲಿನ 400 ಸೀಟುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಆರಂಭದಲ್ಲಿ ಒಪ್ಪಿಗೆ ನೀಡಿರಲಿಲ್ಲ. ರಾಜ್ಯ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟ ನಂತರ 400 ಸೀಟುಗಳ ಪ್ರವೇಶಕ್ಕೆ ಅನುಮತಿ ದೊರೆತಿದೆ ಎಂದರು.

ಪ್ರವೇಶಕ್ಕೆ ಅನುಮತಿ ನೀಡಿರುವ ಕಾಲೇಜುಗಳ ಪಟ್ಟಿಯನ್ನು ಎಂಸಿಐ ಅಂತರಜಾಲ ತಾಣದಲ್ಲಿ ಪ್ರಕಟಿಸಿದ ಕೂಡಲೇ ಸೀಟು ಹಂಚಿಕೆ ಪಟ್ಟಿಯಲ್ಲಿ ಆ ಕಾಲೇಜುಗಳನ್ನು ಸೇರಿಸಲು ಆಗುವುದಿಲ್ಲ. ಲಿಖಿತವಾಗಿ ಮಾಹಿತಿ ಬರಬೇಕಾಗುತ್ತದೆ. ಇದಾದ ನಂತರ ಸರ್ಕಾರಿ ಆದೇಶವಾಗಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದೆರಡು ದಿನ ಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಸೀಟುಗಳು ಮಾಯವಾಗಿವೆ ಎನ್ನುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವರ್ಷ ಸರ್ಕಾರಿ ಕೋಟಾದಡಿ 2,221 ಸೀಟುಗಳು ದೊರೆತಿದ್ದವು. ಈ ವರ್ಷ ಒಟ್ಟು 2,442 ಸೀಟುಗಳು ದೊರೆಯಲಿದ್ದು, ಒಟ್ಟಾರೆ 221 ಸೀಟುಗಳು ಹೆಚ್ಚಳವಾಗಿವೆ. 42 ಸೀಟುಗಳಿಗೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿದ್ದು, ಕೋರ್ಟ್ ತೀರ್ಪಿನ ಮೇಲೆ ಅವಲಂಬನೆಯಾಗುತ್ತದೆ ಎಂದರು.

7,425 ಸೀಟುಗಳು ವಾಪಸ್: 79 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಡೀಮ್ಡ ವಿಶ್ವವಿದ್ಯಾಲಯಗಳು 7,425 ಸೀಟುಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದು, ಆ ಸೀಟುಗಳನ್ನು ಸರ್ಕಾರಿ ಕೋಟಾಗೆ ಸೇರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಕಾಮೆಡ್ - ಕೆ ಕೌನ್ಸೆಲಿಂಗ್ ಆರಂಭವಾಗಿರುವುದಕ್ಕೆ ಪೋಷಕರು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಕಾಮೆಡ್ - ಕೆ ಸೀಟು ವಾಪಸ್ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ ಹಿಂತಿರುಗಿಸುವುದಾಗಿ ಕಾಮೆಡ್ - ಕೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಕಾಮೆಡ್ - ಕೆ ಸೀಟುಗಳನ್ನು ವಾಪಸ್ ಮಾಡಲು ಇದೇ 13 ಕೊನೆಯ ದಿನವಾಗಿದ್ದು, ಅವಧಿ ವಿಸ್ತರಿಸುವಂತೆ ಮಾಡಿರುವ ಮನವಿಯನ್ನು ತಾತ್ವಿಕವಾಗಿ ಒಪ್ಪಿದ್ದಾರೆ. ಕಾಮೆಡ್ - ಕೆ ಕೋಟಾದ ವೈದ್ಯಕೀಯ ವಿಭಾಗದಲ್ಲಿ ಒಟ್ಟು 683 ಸೀಟುಗಳಿದ್ದು, 348 ಮಂದಿ ಈಗಾಗಲೇ ಸೀಟು ಆಯ್ಕೆಯನ್ನು ಖಚಿತಪಡಿಸಿದ್ದಾರೆ. ಇದರಲ್ಲಿ ಕರ್ನಾಟಕದ 21 ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.

310 ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಸೀಟು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ ಕರ್ನಾಟಕದ 113 ವಿದ್ಯಾರ್ಥಿಗಳು ಇದ್ದಾರೆ. ಅದೇ ರೀತಿ ದಂತ ವೈದ್ಯಕೀಯ ವಿಭಾಗದಲ್ಲಿ ಒಟ್ಟು 744 ಸೀಟುಗಳಿದ್ದು, 254 ವಿದ್ಯಾರ್ಥಿಗಳು ಸೀಟು ಆಯ್ಕೆಯನ್ನು ಖಚಿತಪಡಿಸಿದ್ದಾರೆ.

ಇದರಲ್ಲಿ ಕರ್ನಾಟಕದ ಇಬ್ಬರು ಮಾತ್ರ ಇದ್ದಾರೆ. 269 ಮಂದಿ ತಾತ್ಕಾಲಿಕವಾಗಿ ಸೀಟು ಆಯ್ಕೆ ಮಾಡಿಕೊಂಡಿದ್ದು, ಕರ್ನಾಟಕದ 70 ವಿದ್ಯಾರ್ಥಿಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದರು.

96,239 ಎಂಜಿನಿಯರಿಂಗ್ ಸೀಟುಗಳು ಪೈಕಿ ಸರ್ಕಾರಿ ಕೋಟಾದಡಿ 51,222 ಸೀಟುಗಳು ದೊರೆಯಲಿವೆ. ಮೂರು ಹೊಸ ಕಾಲೇಜುಗಳಿಂದಾಗಿ 780 ಸೀಟುಗಳು ಈ ವರ್ಷ ಹೊಸದಾಗಿ ಸೇರ್ಪಡೆಯಾಗಿವೆ. ಈ ತಿಂಗಳ 31ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಆಯುಷ್ ಕೋರ್ಸ್ ಪ್ರವೇಶ
ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ, ಯುನಾನಿ ಇತ್ಯಾದಿ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಆಗಸ್ಟ್ ಎರಡನೇ ವಾರದಲ್ಲಿ ಆರಂಭವಾಗಲಿದೆ. ಆಯುರ್ವೇದ, ಯುನಾನಿ ಕಾಲೇಜುಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಆಗಸ್ಟ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ. ಇದಾದ ನಂತರವೇ ಪ್ರವೇಶ ಆರಂಭವಾಗಲಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಪ್ರವೇಶ ನಡೆದಿತ್ತು.
ವಿಜಯಕುಮಾರ್ ಗೋಗಿ
(ಆಯುಷ್ ನಿರ್ದೇಶಕ )

ಡಿಪ್ಲೊಮಾ ಪ್ರವೇಶ
ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ 38,433 ಸರ್ಕಾರಿ ಹಾಗೂ 4,459 ಸೂಪರ್ ನ್ಯೂಮರರಿ ಸೀಟುಗಳು ಲಭ್ಯವಿದ್ದು, ಈಗಾಗಲೇ 25,351 ಮಂದಿ ಪ್ರವೇಶ ಪಡೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಆರ್. ವಿ.ದೇಶಪಾಂಡೆ ತಿಳಿಸಿದರು.

ಮೊದಲ ಬಾರಿಗೆ ಆನ್ಲೈನ್ ಮೂಲಕ ಪ್ರವೇಶ ನೀಡಲಾಗುತ್ತಿದೆ. 11 ಕೇಂದ್ರಗಳಲ್ಲಿ ಪಾರದರ್ಶಕವಾಗಿ ಪ್ರವೇಶ ನಡೆದಿದ್ದು, ಮೂರು ಸುತ್ತಿನಲ್ಲಿ ಸೀಟು ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.