ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ

Published 5 ಜುಲೈ 2023, 14:05 IST
Last Updated 5 ಜುಲೈ 2023, 14:05 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ವಿಧಿಸಲಾದ ದಂಡದಲ್ಲಿ ಶೇ 50 ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ಫೆಬ್ರುವರಿ 11ರ ಹಿಂದಿನ ಪ್ರಕರಣಗಳಿಗಷ್ಟೇ ಈ ಆದೇಶ ಅನ್ವಯವಾಗಲಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಜೂನ್ ತಿಂಗಳಲ್ಲಿ ಸಭೆ ನಡೆದಿತ್ತು. ಪೊಲೀಸ್‌ ಇಲಾಖೆಯ ಸಂಚಾರಿ ಇ–ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡುವಂತೆ ಕೋರಲಾಗಿತ್ತು.

ಇದನ್ನು ಪರಿಗಣಿಸಿರುವ ಸಾರಿಗೆ ಇಲಾಖೆಯು ದಂಡದ ಮೊತ್ತ ಶೇ 50ರಷ್ಟು ಮಾತ್ರ ಪಡೆಯಲು ಆದೇಶಿಸಿದೆ. ಸೆಪ್ಟೆಂಬರ್‌ 9ರ ಒಳಗೆ ಇತ್ಯರ್ಥಗೊಳ್ಳುವ ಫೆಬ್ರುವರಿ 11ರ ಒಳಗಿನ ಪ್ರಕರಣಗಳಿಗೆ ಮಾತ್ರ ಅನ್ವಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

35.60 ಲಕ್ಷ ಪ್ರಕರಣ ಇತ್ಯರ್ಥ: ಶೇ 50 ದಂಡ ಕಟ್ಟುವ ಅವಕಾಶವನ್ನು ಫೆಬ್ರುವರಿಯಲ್ಲಿ ಕೂಡ ನೀಡಲಾಗಿತ್ತು. ಆಗ 35.60 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದವು. ₹ 102 ಕೋಟಿ ದಂಡ ಸಂಗ್ರಹವಾಗಿತ್ತು

PDF
8ddc6e9fab494a11829cb8f3b2a72d38.pdf
ಓಪನ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT