ಹುಬ್ಬಳ್ಳಿ: ವಿಶ್ವ ಬುದ್ಧ ಧಮ್ಮ ಸಂಘದಿಂದ ನಗರದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ವಿಭಾಗ ಮಟ್ಟದ ಧಮ್ಮ ದೀಕ್ಷಾ ಸಮಾರಂಭದಲ್ಲಿ, ಸುಮಾರು 500 ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ರೈಲ್ವೆ ಆಫೀಸರ್ಸ್ ಕಾಲೊನಿಯಲ್ಲಿರುವ ಬುದ್ಧ ವಿಹಾರದಲ್ಲಿ ಬೀದರ್‌ನ ಧಮ್ಮದೀಪ ಭಂತೇಜಿ ಹಾಗೂ ಸಂಗಡಿಗರು ದೀಕ್ಷೆ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ಸಂಘದ ಪ್ರಧಾನ ಸಂಚಾಲಕ ಹಾಗೂ ನಾಗಸೇನಾ ಬುದ್ಧ ವಿಹಾರದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ‘ಬುದ್ಧನೆಡೆಗೆ ಮರಳಿ ಮನೆಗೆ’ ಎಂಬ ಘೋಷ ವಾಕ್ಯದಡಿ 1956ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸಿದರು. ಅಂದಿನಿಂದ ನಿರಂತರವಾಗಿ ದೇಶದಾದ್ಯಂತ ಧಮ್ಮಯಾನ ನಡೆಯುತ್ತಿದೆ’
ಎಂದರು.

‘ಬೆಂಗಳೂರಿನಲ್ಲಿಅ.14ರಂದು ಮಹಾ ಧಮ್ಮ ದೀಕ್ಷಾ ಸಮಾರಂಭ ನಡೆಯಲಿದ್ದು, ಸುಮಾರು 10 ಲಕ್ಷ ಮಂದಿ ದೀಕ್ಷೆ ಪಡೆಯುವರು. ಧಮ್ಮ ಸ್ವೀಕಾರ ಎಂದರೆ ಮತಾಂತರವಲ್ಲ. ನಮ್ಮ ಮನೆಗೆ ನಾವು ಮರಳುವುದು ಎಂದರ್ಥ’ ಎಂದರು.

‘ಶೋಷಿತರು ಜಾತಿ ಸಂಕೋಲೆಯಿಂದ ಬಿಡುಗಡೆಯಾಗಲು ಧಮ್ಮ ಮಾರ್ಗವೇ ಪರಿಹಾರ. ಇದರಿಂದ ನವ ಬೌದ್ಧರ ಮೀಸಲಾತಿಗೆ ತೊಂದರೆಯಾಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಖಚಿತಪಡಿಸಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.