ಬೆಂಗಳೂರು: ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಪಕ್ಷವು 50,000 ಜನರ ಸಹಿ ಸಂಗ್ರಹಿಸಿದೆ. ಈ ವಿಚಾರವಾಗಿ ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದ ಪಕ್ಷವು, ಸಂಬಂಧಿತ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ನಮ್ಮ ನಾಡು ನಮ್ಮ ಆಳ್ವಿಕೆಯ ಕವಿರಾಜ್ ಅವರು ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ‘ನಾವು ರೂಪಿಸಿದ್ದ ಆನ್ಲೈನ್ ಅರ್ಜಿಗೆ 50 ಸಾವಿರ ಜನರು ಸಹಿ ಮಾಡಿದ್ದು, ಇದೊಂದು ಮಹತ್ವದ ಮೈಲುಗಲ್ಲು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅದನ್ನು ಮಾಡಿದ್ದೇವೆ’ ಎಂದಿದ್ದಾರೆ.

‘ದ್ವಿಭಾಷಾ ನೀತಿ ಸಹಿ ಸಂಗ್ರಹ ಕುರಿತಾದ ನಮ್ಮ ಫಲಕವನ್ನು ಮುಖ್ಯಮಂತ್ರಿ ಆಸಕ್ತಿಯಿಂದ ಓದಿದರು. 50 ಸಾವಿರ ಕನ್ನಡಿಗರ ಬೆಂಬಲದ ಸಹಿ ಹಾಕಿಸಿದ್ದೇವೆ ಅಂದಾಗ, ಎಲ್ಲಿ ಹಾಕ್ಸಿದ್ರಿ ? ಹ್ಯಾಗೆ ? ಎಂದು ಕುತೂಹಲದೊಂದಿಗೆ ಕೇಳಿದರು. ನಾವು ಆನ್ಲೈನ್ನಲ್ಲಿ ಎಂದು ವಿವರಿಸಿ, ಪಿಟಿಷನ್ನ ಲಿಂಕ್ ಓಪನ್ ಮಾಡಿ ತೋರಿಸಿದೆವು. ದ್ವಿಭಾಷಾ ನೀತಿ ಜಾರಿಗೆ ತಂದರೆ ಕನ್ನಡದ ಮಕ್ಕಳಿಗೆ ಸಹಾಯ ಆಗುತ್ತದೆ ಎಂದಾಗ, ಮುಖ್ಯಮಂತ್ರಿ ಅವರು ಸಮ್ಮತಿ ಎಂಬಂತೆ ತಲೆ ಆಡಿಸಿದರು’ ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.