ಮಂಗಳವಾರ, 18 ಜೂನ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಬಳಿ ಒತ್ತಾಯಿಸಲು ಬೆಂಗಳೂರಿನತ್ತ ರೈತರು

Last Updated 3 ಫೆಬ್ರುವರಿ 2018, 13:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹದಾಯಿ ವಿವಾದ ಇತ್ಯರ್ಥಕ್ಕೆ ‌ಒತ್ತಾಯಿಸಿ ಪ್ರಧಾನಿ ಮೋದಿ ಅವರಿಗೆ ‌ಮುತ್ತಿಗೆ ಹಾಕುವ ಸಲುವಾಗಿ ಬೆಂಗಳೂರಿಗೆ ತೆರಳುತ್ತಿದ್ದ ನವಲಗುಂದ ‌ರೈತ ಹೋರಾಟಗಾರರನ್ನು ‌ಪೊಲೀಸರು ದಸ್ತಗಿರಿ ಮಾಡಿದರು.

ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ‌ಲೋಕನಾಥ ಹೆಬಸೂರ ಸೇರಿದಂತೆ ಹಲವು ‌ರೈತರನ್ನು ಪೊಲೀಸರು ‌ಧಾರವಾಡಕ್ಕೆ ಕರೆದೊಯ್ಯುತ್ತಿದ್ದಾರೆ.

ರೈಲಿನ ಮೂಲಕ ಬೆಂಗಳೂರಿಗೆ ತೆರಳಲು ಹುಬ್ಬಳ್ಳಿಯತ್ತ ಬರುತ್ತಿದ್ದ ರೈತರನ್ನು ಪೊಲೀಸರು ಗೊಬ್ಬರಗುಂಪಿ, ಹೆಬಸೂರು ಗ್ರಾಮಗಳ ಬಳಿ ದಸ್ತಗಿರಿ ‌ಮಾಡಿದರು.

ಇಷ್ಟಾಗಿಯೂ ಪೊಲೀಸರ‌ ಕಣ್ತಪ್ಪಿಸಿ 19 ರೈತರು ರೈಲು ನಿಲ್ದಾಣ ‌ತಲುಪಿದರು. ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕಿನ ಸುಮಾರು 130 ರೈತರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಧಾರವಾಡದಲ್ಲಿ 40ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರ ಬಂಧನ

ಧಾರವಾಡ: ನವಲಗುಂದ ಮೂಲದ 40ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರು ಪೊಲೀಸರ ಸುಪರ್ದಿಯಲ್ಲಿದ್ದಾರೆ.

ಪ್ರಧಾನಿ ಮೊದಿಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಬಂಧಿಸಲಾಗಿದೆ.

ಬಂಧಿತ ಹೋರಾಟಗಾರರನ್ನು ಪೊಲೀಸರು ಧಾರವಾಡ ಜಿಲ್ಲಾ ಡಿಆರ್ ಮೈದಾನಕ್ಕೆ ಕರೆತಂದರು.

ಇಂದು ರಾತ್ರಿ ಮೈದಾನದಲ್ಲಿ ಮಹದಾಯಿ ಹೋರಾಟಗಾರರು ವಾಸ್ತವ್ಯ ಹೂಡಲು ಪೊಲೀಸರ ವ್ಯವಸ್ಥೆ ಕಲ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT