ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಡಿಸಿಎಂ, ಒಬ್ಬ ಪ್ರಧಾನ ಡಿಸಿಎಂ ಆಗಲಿ: ರಾಯರಡ್ಡಿ

Published 22 ಸೆಪ್ಟೆಂಬರ್ 2023, 16:07 IST
Last Updated 22 ಸೆಪ್ಟೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಆರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಜಿಸುವ ಜತೆಗೆ ‘ಪ್ರಿನ್ಸಿಪಲ್‌ ಡೆಪ್ಯುಟಿ ಚೀಫ್‌ ಮಿನಿಸ್ಟರ್‌’ ಹುದ್ದೆಯನ್ನು ಸೃಜಿಸಿ ಇತಿಹಾಸ ಸೃಷ್ಟಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

‘ಬಿಜೆಪಿ ಸರ್ಕಾರದಲ್ಲಿ ಮೂವರು ಡಿಸಿಎಂಗಳಿದ್ದರು. ಆಂಧ್ರ ಪ್ರದೇಶದಲ್ಲಿ ಐವರು ಡಿಸಿಎಂಗಳಿದ್ದಾರೆ. ಆದ್ದರಿಂದ ಇಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್‌ ಆರು ಹುದ್ದೆಗಳನ್ನು ಸೃಷ್ಟಿಸಲಿ’ ಎಂದು ಆಗ್ರಹಿಸಿದರು.

‘ರಾಜ್ಯದ ಪ್ರತಿಯೊಂದು ವಲಯ ಸೇರಿದಂತೆ ಪ್ರಬಲ ಸಮುದಾಯಕ್ಕೆ ಹುದ್ದೆ ಕೊಟ್ಟಂತಾಗುತ್ತದೆ. ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿಸುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸಿಬಹುದು ಎಂದು ಹೇಳಲಾಗುತ್ತಿದೆ. ಆದ್ದರಿಂದ ಮೂರೇಕೆ ಆರು ಡಿಸಿಎಂಗಳನ್ನೇ ನೇಮಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT