ಕಲಬುರ್ಗಿ:ಜೇವರ್ಗಿ ತಾಲ್ಲೂಕಿನ ನರಿಬೋಳ ಗ್ರಾಮದಲ್ಲಿ 14 ವರ್ಷದ ಬಾಲಕನ ಮರ್ಮಾಂಗ ಕತ್ತರಿಸಿ ಕೊಲೆ ಮಾಡಲಾಗಿದೆ.

ಮಹೇಶ ಕೊಳ್ಳಿ (14) ಕೊಲೆಯಾದ ಬಾಲಕ. 7ನೇ ತರಗತಿ ಓದಿದ್ದ ಈತ ಕೊರೊನಾ ಕಾರಣದಿಂದ ಶಾಲೆಗೆ ಹೋಗದೇ ಮನೆಯಲ್ಲಿ ಇರುತ್ತಿದ್ದ. ಸೋಮವಾರ ಸಂಜೆ ಮನೆಯಿಂದ ಹೊರ ಹೋಗಿದ್ದ. ಶುಕ್ರವಾರ ಶವ ಪತ್ತೆಯಾಗಿದೆ. ‘ಕೊಲೆ ಮಾಡುವ ಮುನ್ನ ಬಾಲಕನಿಗೆ ಮದ್ಯ ಕುಡಿಸಿದ್ದಾರೆ. ಮತ್ತು ಬರಿಸುವ ಔಷಧಿ ನೀಡಿ, ಆತನ ಮೂಗು ಹಾಗೂ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಮುಖಕ್ಕೆ ಗುದ್ದಿ, ಹಲ್ಲುಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ. ಕೊಲೆ ಮಾಡಿದ ನಂತರ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಭೀಮಾ ನದಿಯಲ್ಲಿ ಎಸೆದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಹೇಶ, ಅನ್ಯಕೋಮಿನಬಾಲಕಿಯೊಬ್ಬಳಿಗೆ ಮೊಬೈಲ್ ಕೊಡಿಸಿದ್ದ. ಇಬ್ಬರೂ ಆಗಾಗ ಮಾತನಾಡುತ್ತಿದ್ದರು. ಈ ವಿಷಯ ಬಾಲಕಿಯ ತಾಯಿಗೆ ಗೊತ್ತಾಗಿ, ಆಕೆ ತನ್ನ ಮನೆಯವರಿಗೆ ತಿಳಿಸಿದ್ದಳು. ಆಕೆಯ ಮೇಲೆಯೇ ಅನುಮಾನವಿದೆ ಎಂದು ಹತ್ಯೆಗೀಡಾದ ಬಾಲಕನ ತಾಯಿಭೀಮಾಬಾಯಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.