ಬೆಂಗಳೂರು: ‘ರಾಜ್ಯದ ಎಂಜಿನಿಯರ್ಗಳನ್ನು ಮನೆಹಾಳರು ಎಂದು ವಿಧಾನಸಭೆಯಲ್ಲಿ ನಿಂದಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ತಕ್ಷಣ ಎಂಜಿನಿಯರ್ಗಳ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ಎಂಜಿನಿಯರ್ಗಳ ಸಂಘದ ಗೌರವ ಅಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಬುಧವಾರ ಭೇಟಿ ಮಾಡಿ, ತಮ್ಮ ಹೇಳಿಕೆಯನ್ನು ಅಶೋಕ ಅವರು ಹಿಂತೆಗೆದುಕೊಳ್ಳುವಂತೆ ಒತ್ತಡ ತರಬೇಕೆಂದು ಮನವಿ ಮಾಡಿದರು.

‘ಅಣೆಕಟ್ಟೆಗಳು, ವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡಗಳು, ಐಟಿಬಿಟಿ ಕ್ಷೇತ್ರ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅನೇಕ ಕ್ಷೇತ್ರಗಳಲ್ಲಿ ಎಂಜಿನಿಯರ್ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯ ಮತ್ತು ದೇಶದ ಪ್ರಗತಿಯ ರೂವಾರಿಗಳನ್ನು ಮನೆಹಾಳರು ಎಂದು ಕರೆದಿರುವುದು ಸರಿಯಲ್ಲ’ ಎಂದರು.

ದೂರವಾಣಿ ಕರೆ: ಅಶೋಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಡಿ.ಕೆ. ಶಿವಕುಮಾರ್, ಎಂಜಿನಿಯರ್ಗಳನ್ನು ಅವಹೇಳನ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.