ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರಿನಲ್ಲಿ ಕಾರ್ಯಕರ್ತರಿಗೆ ಚೂರಿ ಇರಿತ: ವಿಜಯೇಂದ್ರ ಎಚ್ಚರಿಕೆ

Published 10 ಜೂನ್ 2024, 19:54 IST
Last Updated 10 ಜೂನ್ 2024, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮೂಲಭೂತವಾದಿಗಳು ನಮ್ಮ ಕಾರ್ಯಕರ್ತರಿಗೆ ಚೂರಿಯಿಂದ ಇರಿದು ಅಟ್ಟಹಾಸ ಮೆರೆದಿದ್ದಾರೆ. ಅವರನ್ನು ಉಗ್ರ ಶಿಕ್ಷೆಗೆ ಗುರಿ‍ಪಡಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂಭ್ರಮಾಚರಣೆ ಮುಗಿಸಿ ಬರುವಾಗ ಕಾರ್ಯಕರ್ತರ ಮೇಲೆ ದುರುಳರಿಂದ ಹಲ್ಲೆ ನಡೆದಿದೆ ಎಂದು ಅವರು ‘ಎಕ್ಸ್‌’ ಮೂಲಕ ಖಂಡಿಸಿದ್ದಾರೆ.

ಆಡಳಿತದಲ್ಲಿ ಬಿಗಿ ಕಳೆದುಕೊಂಡ ಪರಿಣಾಮ ದುಷ್ಕರ್ಮಿಗಳ ಅಟ್ಟಹಾಸ ಮೇರೆ ಮೀರುತ್ತಿದೆ. ಇದರ ಮುಂದುವರೆದ ಭಾಗವಾಗಿಯೇ ಚೂರಿ ಇರಿತ ನಡೆದಿದೆ. ಮೂಲಭೂತವಾದಿ ಕಿಡಿಗೇಡಿಗಳು ಕಾಂಗ್ರೆಸ್‌ ಸರ್ಕಾರದ ಓಲೈಕೆ ನಿಲುವುಗಳಿಂದ ಕಾನೂನು ಕುಣಿಕೆಯ ಭಯವಿಲ್ಲದ ಕಾರಣದಿಂದಲೇ ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ. ಇವರನ್ನು ಶಿಕ್ಷೆಗೆ ಒಳಪಡಿಸದಿದ್ದರೆ ಹೋರಾಟದ ಮೂಲಕವೇ ಉತ್ತರ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT