ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ತಪ್ಪು: ಜಗ್ಗೇಶ್

Published 30 ಸೆಪ್ಟೆಂಬರ್ 2023, 15:58 IST
Last Updated 30 ಸೆಪ್ಟೆಂಬರ್ 2023, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರ ಬಹಳ ದೊಡ್ಡ ತಪ್ಪು ಮಾಡಿದೆ. ನೀರು ಬಿಟ್ಟ ನಂತರ ಸರ್ವಪಕ್ಷ ಸಭೆ ನಡೆಸಿತು. ಹೀಗೆ ಮಾಡಬಾರದಿತ್ತು. ಇಷ್ಟ ಬಂದಾಗ ನೀರು ಬಿಟ್ಟು ಕುತ್ತಿಗೆಗೆ ಬಂದಾಗ ಆ ತಪ್ಪನ್ನು ಬೇರೆಯವರ ಮುಖಕ್ಕೆ ಒರೆಸುವ ಪಲಾಯನ ಸೂತ್ರ ತಪ್ಪು’ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸುವ ಕೆಲಸವಾಗಿತ್ತು. ಹೋರಾಟದಿಂದ ಈ ಸಮಸ್ಯೆಗೆ ಪರಿಹಾರ ಖಂಡಿತಾ ಇಲ್ಲ. ಸಂಕಷ್ಟ ಸೂತ್ರವನ್ನು ಕಾನೂನಿನಲ್ಲಿ ಅಳವಡಿಸಬೇಕು. ಇನ್ನೆರಡು ವರ್ಷ ಬಿಟ್ಟು ಮಳೆ ಬರದೇ ಇದ್ದಾಗಲೂ ಇದೇ ಸಮಸ್ಯೆ ಮತ್ತೆ ಬರಲಿದೆ. ಎಲ್ಲರ ಬೆಂಬಲ ತೆಗೆದುಕೊಂಡು ಕಾನೂನು ಪ್ರಕಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದಿದ್ದಾರೆ.

ಜಗ್ಗೇಶ್‌ ಅಸಮಾಧಾನ: ‘ಕಾವೇರಿ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಧರಣಿಯಲ್ಲಿ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಒಬ್ಬ ಕಲಾವಿದ ಬರದೇ ಇದ್ದರೆ ಆತ ಕನ್ನಡ, ಕನ್ನಡ ನಾಡಿನ ಪರ ಇಲ್ಲ ಎಂದು ಗೂಬೆ ಕೂರಿಸುತ್ತಾರೆ. ಕಲಾವಿದರ ಬಗ್ಗೆ ಕೆಟ್ಟ ಕಮೆಂಟ್‌ ಹಾಕುತ್ತಾರೆ. ಯಾರೋ ಒಬ್ಬ ಕಲಾವಿದ ಬಂದು ಭಾಷಣ ಮಾಡಿದ ತಕ್ಷಣ ನೀರು ಬಿಡುವುದನ್ನು ನಿಲ್ಲಿಸುತ್ತಾರೆಯೇ. ಖಂಡಿತಾ ನಿಲ್ಲಿಸುವುದಿಲ್ಲ. ಕಲಾವಿದರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಬೇರೆ ಭಾಷೆ ಕಲಾವಿದರೆಲ್ಲ ಇಲ್ಲಿಯ ಕಲೆಕ್ಷನ್‌ ತೆಗೆದುಕೊಂಡು ಮೆರೆಯುತ್ತಿದ್ದಾರೆ. ಬೇರೆಯವರಿಗೆ ಕೋಟಿಗಟ್ಟಲೆ ವ್ಯವಹಾರ ಕೊಡುತ್ತೀರಿ. ಈವಾಗ ಯಾವ ಸ್ವಾಭಿಮಾನ ಬಂದುಬಿಟ್ಟಿದೆ ಎಂದು ಕಲಾವಿದರನ್ನು ಕರೆಯುತ್ತಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT