ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ರೈಲು

ಹೆಚ್ಚುವರಿಯಾಗಿ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Published 5 ಮೇ 2024, 16:01 IST
Last Updated 5 ಮೇ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ಹೆಚ್ಚಾಗಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಮಾಡಲು ಹೆಚ್ಚುವರಿಯಾಗಿ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಮೇ 6ರಂದು ರಾತ್ರಿ 11ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹುಬ್ಬಳ್ಳಿಗೆ ವಿಶೇಷ ರೈಲು ಹೊರಡಲಿದೆ. ಬೆಂಗಳೂರು ಕಂಟೋನ್ಮೆಂಟ್‌, ತುಮಕೂರು, ದಾವಣಗೆರೆ, ಹರಿಹರ, ಹಾವೇರಿ ಮೂಲಕ ಸಂಚರಿಸಲಿರುವ ಈ ರೈಲು ಮರುದಿನ ಬೆಳಿಗ್ಗೆ 7.55ಕ್ಕೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ. ಇದು ಟ್ರಿಪ್‌ ಆಗಿದೆ.

ಹುಬ್ಬಳ್ಳಿ–ನಹರ್ಲಗನ್‌– ಹುಬ್ಬಳ್ಳಿ ನಡುವೆ ಮೇ 8ರಿಂದ ಜೂನ್‌ 5ರ ವರೆಗೆ 5 ಟ್ರಿಪ್‌ ವಿಶೇಷ ರೈಲು ಸಂಚರಿಸಲಿದೆ. ಗದಗ, ಹೊಸಪೇಟೆ, ಗುಂತಕಲ್, ಗುಂಟೂರು, ವಿಜಯನಗರ ಮೂಲಕ ಸಾಗಲಿರುವ ಈ ರೈಲು ಅರುಣಾಚಲ ಪ್ರದೇಶದ ನಹರ್ಲಗನ್‌ ನಿಲ್ದಾಣವನ್ನು ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT