ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 45,557 ಬಾಲ ತಾಯಂದಿರು!

ಮೈಸೂರಿನಲ್ಲೇ ಅತಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ
Published 6 ಆಗಸ್ಟ್ 2023, 0:28 IST
Last Updated 6 ಆಗಸ್ಟ್ 2023, 0:28 IST
ಅಕ್ಷರ ಗಾತ್ರ

ಕೆ.ನರಸಿಂಹಮೂರ್ತಿ

ಮೈಸೂರು: ರಾಜ್ಯದಲ್ಲಿ ಮೂರೂವರೆ ವರ್ಷದಲ್ಲಿ 45,557 ಬಾಲಕಿಯರು ತಾಯಂದಿರಾಗಿದ್ದಾರೆ. ಕೋವಿಡ್‌ ಮೊದಲ ಮತ್ತು ಎರಡನೇ ಅವಧಿಗಿಂತಲೂ, ಆ ನಂತರದ ವರ್ಷದಲ್ಲಿ (2022) ಈ ಸಂಖ್ಯೆ ಹೆಚ್ಚಾಗಿದೆ.

30 ಜಿಲ್ಲೆಗಳ ಪೈಕಿ ಮೈಸೂರಿನಲ್ಲೇ ಒಟ್ಟಾರೆ ಪ್ರಕರಣಗಳು ಅತಿ ಹೆಚ್ಚಿವೆ. 

ನಗರದ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಿದ್ದ ಅರ್ಜಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು 2020ರಿಂದ 2023 ಜೂನ್‌ವರೆಗಿನ ಮಾಹಿತಿಯನ್ನು ನೀಡಿದೆ. ಈ ಮಾಹಿತಿಯಲ್ಲಿ ಈ ಅಂಶ ಇದೆ.

ಮೈಸೂರಿನ ನಂತರ ಅತಿ ಹೆಚ್ಚು ಬಾಲ ತಾಯಂದಿರು ಇರುವ ಇರುವ ಜಿಲ್ಲೆ ಚಿತ್ರದುರ್ಗ. ನಂತರದ ಮೂರು ಜಿಲ್ಲೆಗಳು; ಬಳ್ಳಾರಿ, ತುಮಕೂರು ಮತ್ತು ಕಲಬುರ್ಗಿ.

ಕೋವಿಡ್‌ ನಂತರದ ವರ್ಷ 2022ರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಕಲಬುರಗಿ, ಬಳ್ಳಾರಿ, ಮೈಸೂರು, ತುಮಕೂರು, ಬೆಳಗಾವಿ ಮತ್ತು ಚಿತ್ರದುರ್ಗದಲ್ಲಿ 1 ಸಾವಿರಕ್ಕಿಂತ ಹೆಚ್ಚು ಹಾಗೂ 2 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ವರ್ಷದ ಮೊದಲ ಆರು ತಿಂಗಳಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲೇ ಅಧಿಕ (374) ಪ್ರಕರಣಗಳಿವೆ.

ಅತಿ ಕಡಿಮೆ: ಇಡೀ ರಾಜ್ಯದಲ್ಲಿ ಉಡುಪಿಯಲ್ಲಿ ಅತಿ ಕಡಿಮೆ (86) ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡದಲ್ಲಿ 148 ಪ್ರಕರಣಗಳು ವರದಿಯಾಗಿವೆ. ಉಳಿದ, 11 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ 1 ಸಾವಿರದ ಒಳಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT