ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ಜೂನ್ 1ರಿಂದ ಆರಂಭವಾಗಲಿದ್ದು, ಮೇ 13ರಿಂದ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ.

ಅಕ್ಟೋಬರ್ 2ರಿಂದ ಅ. 18ರವರೆಗೆ ದಸರಾ ರಜೆ ಇದ್ದು, ಅ.19ರಿಂದ ಮಾರ್ಚ್ 31ರವರೆಗೆ (2025) ಎರಡನೆ ಅವಧಿಯ ತರಗತಿಗಳು ನಡೆಯಲಿವೆ. ಏ.1ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ದಂಡ ಶುಲ್ಕವಿಲ್ಲದೇ ಜೂನ್ 14ರ ಒಳಗೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯು ಸೇರಿದಂತೆ ಜೂನ್ 29ರ ಒಳಗೆ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಪ್ರವೇಶ ಶುಲ್ಕಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಮುಂದುವರಿ ಯಲಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಮಾರ್ಗಸೂಚಿಯಂತೆ ಎಲ್ಲ ಕಾಲೇಜುಗಳು ಮೀಸಲಾತಿ ಅನ್ವಯ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ
ಗಳಿಗೆ ಪ್ರವೇಶ ನೀಡಬೇಕು ಎಂದು ಪಿಯು ನಿರ್ದೇಶನಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.