ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲುಗಳಲ್ಲಿ ಅಂಗವಿಕಲರಿಗೆ ಸೀಟು ಹಂಚಿಕೆ

Published 13 ಮಾರ್ಚ್ 2024, 16:00 IST
Last Updated 13 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ರೈಲುಗಳಲ್ಲಿ ಅಂಗವಿಕಲರಿಗಾಗಿ ಆಸನಗಳನ್ನು ಮೀಸಲಿಡಲು ರೈಲ್ವೆ ಮಂಡಳಿ ನಿರ್ಧರಿಸಿದೆ. 

ರಾಜಧಾನಿ, ಡುರೊಂಟೊ, ವಂದೇ ಭಾರತ್, ಹಮ್ಸಫರ್, ಗತಿಮಾನ್, ವಿಶೇಷ ರೈಲುಗಳು ಸೇರಿದಂತೆ ಎಲ್ಲಾ ಕಾಯ್ದಿರಿಸಿದ ಮೇಲ್/ಎಕ್ಸ್‌ಪ್ರೆಸ್  ರೈಲುಗಳಲ್ಲಿ ಸೀಟುಗಳನ್ನು ನಿಗದಿ ಮಾಡಲಾಗಿದೆ.

ಸ್ಲೀಪರ್ ಕ್ಲಾಸ್‌ನಲ್ಲಿ ಎರಡು ಕೆಳ ಮತ್ತು ಎರಡು ಮಧ್ಯಮ ಬರ್ತ್‌ಗಳು (3ಇ ಅಥವಾ 3ಎ) ಅಂಗವಿಕಲರಿಗೆ ಮೀಸಲಾಗಿರುತ್ತವೆ. ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲುಗಳ ಎಸ್‌ಎಲ್‌ಆರ್‌ಡಿ ಬೋಗಿಯಲ್ಲಿ ನಾಲ್ಕು ಬರ್ತ್ ಗಳು, ಎರಡಕ್ಕಿಂತ ಹೆಚ್ಚು ಬೋಗಿಗಳನ್ನು ಹೊಂದಿರುವ ರೈಲುಗಳಲ್ಲಿ ಕಾಯ್ದಿರಿಸಿದ ಎರಡನೇ ದರ್ಜೆ (2ಎಸ್‌) / ಹವಾನಿಯಂತ್ರಿತ ಚೇರ್ ಕಾರ್‌ನಲ್ಲಿ (ಸಿಸಿ) ನಾಲ್ಕು ಆಸನಗಳನ್ನು ನಿಗದಿಪಡಿಸಲಾಗಿದೆ. ‘ವಂದೇ ಭಾರತ್‌’ನಲ್ಲಿ ಎಂಟು ಬೋಗಿ ಇದ್ದಾಗ ಬೋಗಿ ಸಂಖ್ಯೆ ಸಿ1 ಮತ್ತು ಸಿ7ರಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಸನ ಸಂಖ್ಯೆ 40 ಹಾಗೂ 16  ಬೋಗಿ ಹೊಂದಿರುವ  ರೈಲುಗಳಲ್ಲಿ ಬೋಗಿ ಸಂಖ್ಯೆ ಸಿ1 ಮತ್ತು ಸಿ14ಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಆಸನ ಸಂಖ್ಯೆ 40 ಮತ್ತು ಅದರ ಪಕ್ಕದಲ್ಲಿ ತಲಾ ಒಂದು ಆಸನವನ್ನು ವಿನ್ಯಾಸಗೊಳಿಸಲಾಗಿದೆ.

ವಿಶಿಷ್ಟ ಗುರುತಿನ ಚೀಟಿ ಪಡೆದ ಅಂಗವಿಕಲರಷ್ಟೇ ಈ ಸೌಲಭ್ಯವನ್ನು ಬಳಸಬಹುದು ಎಂದು ರೈಲ್ವೆ ಮಂಡಳಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT