ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನಗಳಲ್ಲಿ ಶಾಲೆಗಳಿಗೆ ತಿದ್ದುಪಡಿ ಕೈಪಿಡಿ: ಸಚಿವ ಮಧು ಬಂಗಾರಪ್ಪ

Published 22 ಜೂನ್ 2023, 23:31 IST
Last Updated 22 ಜೂನ್ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯ ಪಠ್ಯಗಳಲ್ಲಿನ ಕೆಲ ಪಾಠಗಳನ್ನು ಕೈಬಿಟ್ಟು ಮಾಡಿರುವ ತಿದ್ದುಪಡಿ ಕೈಪಿಡಿಯನ್ನು 10 ದಿನಗಳ ಒಳಗೆ ಶಾಲೆಗೆ ತಲುಪಿಸಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಬದಲಿಸಲಾದ ಪಾಠಗಳು, ಪರಿಷ್ಕರಣೆಗೆ ಒಳಗಾದ ಕೆಲ ಪಾಠಗಳಲ್ಲಿನ ತಿದ್ದುಪಡಿ ಸೇರಿ 150 ಪುಟಗಳಾಗಬಹುದು. ಸುಮಾರು ₹ 20 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪರಿಷ್ಕರಣೆಗಾಗಿ ಸಮಿತಿ ರಚಿಸುವ ಕುರಿತು ಚರ್ಚೆಗಳು ನಡೆದಿವೆ. ಸಮಿತಿಯ ನೀಡುವ ವರದಿ ನಂತರ ಪಠ್ಯಪರಿಷ್ಕರಣೆಯ ನಿಯಮಗಳನ್ನು ರೂಪಿಸಲಾಗುವುದು.  1ರಿಂದ 12ನೇ ತರಗತಿಯವರೆಗೂ ಮಕ್ಕಳ ಕಲಿಕೆಗೆ ಪೂರಕವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಲಾಗುವುದು ಎಂದರು. 

ಶಾಲಾ ಮಕ್ಕಳಿಗೆ ಲಿಖಿತ ಪರೀಕ್ಷೆಗಿಂತ ಆಂತರಿಕ ಅಂಕಗಳ ಆಧಾರದ ಮೇಲೆ ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ನೀಡುವ ಚಿಂತನೆ ನಡೆದಿದೆ. ಪರೀಕ್ಷೆಗಳಿರುವುದು ಮಕ್ಕಳನ್ನು ಅನುತ್ತೀರ್ಣ ಮಾಡಲು ಅಲ್ಲ, ಅವರ ಬುದ್ಧಿಮಟ್ಟ ಪರೀಕ್ಷಿಸಲು. ಹಾಗಾಗಿ, ಆಂತರಿಕ ಅಂಕಗಳಿಗೆ ಹೆಚ್ಚು ಒತ್ತು ನೀಡುವ ಕುರಿತು ಚರ್ಚೆ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT