ಹೊಯ್ಸಳರ ವಾಸ್ತುಶಿಲ್ಪದ ಸಮಗ್ರ ಭಾಗಗಳನ್ನು ‘ಇನ್‌ಟ್ಯಾಕ್ ಸಂಸ್ಥೆ’, ವೆಂಕಟಪ್ಪ ಚಿತ್ರಶಾಲೆಯ ನವೀಕರಣಕ್ಕೆ ‘ಬ್ರಿಗೇಡ್ ಸಂಸ್ಥೆ’, ಯೋಜನಾ ನಿರ್ವಹಣೆ ಘಟಕದ ಅಭಿವೃದ್ಧಿಗೆ ‘ಕಲ್ಕಿ ಸಂಸ್ಥೆ’ಗಳು ಸಮ್ಮತಿ ನೀಡಿದವು. ಸಂರಕ್ಷಣಾ ಸ್ಮಾರಕಗಳ ಯೋಜನೆಗೆ ಒಳಪಡಲು ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಇಲಾಖೆಯಿಂದ ಆಶಯಪತ್ರ ವಿತರಿಸಲಾಯಿತು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು.