ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ರಾಜ್ಯಪಾಲರಿಗೆ ಪತ್ರ ಬರೆದು ಅರ್ಕಾವತಿ ಬಡಾವಣೆ ಪ್ರಕರಣ ಕುರಿತು ತನಿಖೆ ನಡೆಸಿದ್ದ ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಅವರೂ ಸಚಿವರಾಗಿದ್ದರು. ಆಗ ಏಕೆ ಧ್ವನಿ ಎತ್ತಲಿಲ್ಲ. ವರದಿ ಬಹಿರಂಗಪಡಿಸಲಿಲ್ಲ. ಸದನದ ಮುಂದೆ ಅವರ ಸರ್ಕಾರ ಏಕೆ ಮಂಡಿಸಲಿಲ್ಲ. ಈಗ ರಾಜಕೀಯ ಕಾರಣಗಳಿಗಾಗಿ ಪತ್ರ ಬರೆದಿದ್ದಾರೆ ಅಷ್ಟೆ’ ಎಂದು ಟೀಕಿಸಿದರು.