ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ' ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಿಂದೂ ಧರ್ಮೀಯರ ಬಹುದಿನಗಳ ಕನಸು ಈ ತೀರ್ಪಿನಿಂದ ನನಸಾಗಲಿದೆ. ಆದರೆ, ದೇವಾಲಯ ನಿರ್ಮಿಸುವ ಹೊಣೆ ಹೊರಲಿರುವ ಟ್ರಸ್ಟ್ ನಲ್ಲಿ ಯಾರು ಇರುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಟ್ರಸ್ಟ್ ಆರ್ ಎಸ್ ಎಸ್ ಪ್ರತಿನಿಧಿಗಳ ಹಿಡಿತದಲ್ಲೇ ಇರುತ್ತದೋ, ಬೇರೆಯವರು ಇರುತ್ತಾರೋ ನೋಡಬೇಕು.ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಎರಡೂ ಕಡೆ ಬಿಜೆಪಿ ಸರ್ಕಾರಗಳೇ ಇವೆ. ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ನೋಡಬೇಕು' ಎಂದರು.

ಇದನ್ನೂ ಓದಿ:ಅಯೋಧ್ಯೆ ತೀರ್ಪು: ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು

ಪರಿಹಾರ ನೀಡಬೇಕಿತ್ತು: 1992ರಲ್ಲಿ ಬಾಬ್ರಿ ಮಸೀದಿಯನ್ನು ಒಡೆದು ಹಾಕಿರುವ ಕೃತ್ಯ ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ಕೊಡುವಂತೆ ನ್ಯಾಯಾಲಯ ಹೇಳಿದೆ. ಎಲ್ಲಿ ಕೊಡುತ್ತಾರೋ ಗೊತ್ತಿಲ್ಲ. ಮಸೀದಿ ಒಡೆದದ್ದು ತಪ್ಪು ಎಂದಾದ ಮೇಲೆ ಅಲ್ಪಸಂಖ್ಯಾತರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಒಂದಷ್ಟು ಆರ್ಥಿಕ ಪರಿಹಾರವನ್ನೂ ಘೋಷಿಸಬೇಕಿತ್ತು. ಕೇಂದ್ರ ಸರ್ಕಾರವೇ ಪರಿಹಾರ ಕೊಡುವಂತೆ ನಿರ್ದೇಶನ ನೀಡಬೇಕಿತ್ತು ಎಂದರು.

ಇನ್ನಷ್ಟು...

ಅಯೋಧ್ಯೆ ತೀರ್ಪು: ‘ಸುಪ್ರೀಂ’ ನ್ಯಾಯಪೀಠ ಹೇಳಿದ್ದಿಷ್ಟು...

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ: ಏನಿದು ದಶಕಗಳ ವ್ಯಾಜ್ಯ

ಅಯೋಧ್ಯೆ ಧ್ವಂಸ ಪ್ರಕರಣ: ವ್ಯಾಜ್ಯಕ್ಕೆ ಒಂದೂವರೆ ಶತಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.