ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ರದ್ದು ಹೇಳಿಕೆ ಬ್ಲ್ಯಾಕ್‌ಮೇಲ್‌ ತಂತ್ರ: ಕುಮಾರಸ್ವಾಮಿ

Published 1 ಫೆಬ್ರುವರಿ 2024, 16:15 IST
Last Updated 1 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ ಐದು ಗ್ಯಾರಂಟಿಗಳು ರದ್ದಾಗಲಿವೆ’ ಎಂಬ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿಕೆ ಬ್ಲ್ಯಾಕ್‌ಮೇಲ್‌ ತಂತ್ರ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು, ನಂತರ ನಿಲ್ಲಿಸಲು ಕಾಂಗ್ರೆಸ್‌ ಪಕ್ಷದ ಸಭೆಯಲ್ಲೇ ನಿರ್ಧಾರವಾಗಿದೆ. ಪಕ್ಷದ ರಹಸ್ಯ ಕಾರ್ಯಸೂಚಿಯನ್ನು ಬಾಲಕೃಷ್ಣ ಅವರು ಬಹಿರಂಗಪಡಿಸಿದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರಿಗೆ ಭಯ ತಂದಿದೆ ಎಂದರು.

ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ಕೊಡಲು ಅವಕಾಶವಿದೆ. ಸರಿಯಾದ ಮಾರ್ಗದಲ್ಲಿ ಹೋಗಿದ್ದರೆ ಐದು ಗ್ಯಾರಂಟಿಗಳನ್ನೂ ಕೊಟ್ಟು ರಾಜ್ಯದ ಅಭಿವೃದ್ಧಿ ಸಹ ಮಾಡಬಹುದಿತ್ತು. ಇವರ ತಪ್ಪುಗಳಿಂದಲೇ ಯೋಜನೆ ಹಳಿತಪ್ಪಿದೆ. ಬಿಜೆಪಿಯ ಅಕ್ಷತೆಗೆ ಜನರು ಮತ ಹಾಕುವುದಾದರೆ, ಕಾಂಗ್ರೆಸ್‌ ಸಹ ಅದನ್ನೇ ಮಾಡಲಿ. ಕಾಂಗ್ರೆಸ್‌ ಅಕ್ಷತೆಗೂ ಮತ ಬೀಳಬಹುದು ಎಂದರು.

‘ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಸ್ವಾಗತಾರ್ಹ. ಇಡೀ ಬೆಟ್ಟ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು. ಆದರೆ, ಅದೂ ಲೋಕಸಭಾ ಚುನಾವಣೆಯವರೆಗಿನ ಹೇಳಿಕೆ ಆಗಬಾರದು. ಹಾರೋಬೆಲೆಯಲ್ಲಿ ಯೇಸುವಿನ ಪ್ರತಿಮೆ ಏಕೆ ಸ್ಥಾಪಿಸಿದರು? ಚರ್ಚ್‌ ಒಳಗೆ ಏನು ಇಟ್ಟಿದ್ದರು ಎಂಬುದೂ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT